ಮುಷ್ಕರಕ್ಕೂ ಮುನ್ನವೇ BMTC ನೌಕರರಿಗೆ ಗುಡ್‌ನ್ಯೂಸ್‌ – 11 ತಿಂಗಳ ಬಾಕಿ ವೇತನ ಬಿಡುಗಡೆ!

ನವದೆಹಲಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುವ ಮೊದಲೇ ಕರ್ನಾಟಕ ಸರ್ಕಾರ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, 11 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆ ಸಂಬಂಧ ಬಹುಕಾಲದಿಂದ ಬಾಕಿಯಾಗಿದ್ದ ಹಿಂಬಾಕಿ ಮೊತ್ತವನ್ನು ಕೊನೆಗೂ ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರ 4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ನೀಡಲು ಇತ್ತೀಚೆಗೆ ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಹೀಗಾಗಿ ಇಂದು 11 ತಿಂಗಳ ಹಿಂಬಾಕಿ ಹಣವನ್ನ ಬಿಡುಗಡೆ ಮಾಡಿದೆ. ಉಳಿದ 3 ನಿಗಮಗಳ ನೌಕರರಿಗೂ ಹಿಂಬಾಕಿ ಹಣ ಪಾವತಿಯಾಗಿದೆ. ಇನ್ನೂ 15 ತಿಂಗಳ ಹಿಂಬಾಕಿಯನ್ನ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದೆ.

ಇದನ್ನೂ ಓದಿ : ಕಾಂಗ್ರೆಸ್ ಅಸಹಾಯಕ ವರ್ಗಕ್ಕೆ ಪಿಂಚಣಿ ನೀಡಲು ಯೋಗ್ಯತೆಯಿಲ್ಲದ ಸರ್ಕಾರ – ಆರ್‌.ಅಶೋಕ್ ಆಕ್ರೋಶ!

Btv Kannada
Author: Btv Kannada

Leave a Comment

Read More