ದೇಶದ ಜನತೆಗೆ ಬಿಗ್ ಶಾಕ್ – ಪೆಟ್ರೋಲ್, ಡೀಸೆಲ್ ಬೆಲೆ 3 ರೂ. ಏರಿಕೆ!

ಬೆಂಗಳೂರು : ದೇಶದ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ ಎದುರಾಗಿದೆ. ತೈಲ ಕಂಪನಿಗಳು ತಕ್ಷಣವೇ ಜಾರಿಗೆ ಬರುವಂತೆ ಪೆಟ್ರೋಲ್ ಡೀಸೆಲ್ ಬೆಲೆ 3 ರೂಪಾಯಿ ಏರಿಕೆ ಮಾಡಿ ಇಂದು ಘೋಷಣೆ ಮಾಡಿದೆ.

ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ 3.26 ರೂ ಹಾಗೂ ಡೀಸೆಲ್ ಬೆಲೆ 3.12 ರೂ ಹೆಚ್ಚಳ ಆಗಿದೆ. ಅದೇ ರೀತಿ ಮೆಟ್ರೋ ಸಿಟಿಗಳಾದ ದೆಹಲಿ, ಕೋಲ್ಕತ್ತಾ , ಮುಂಬೈ, ಚೆನ್ನೈ ನಲ್ಲೂ ಹೆಚ್ಚಳ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ 3 ರೂ ಹೆಚ್ಚಳದ ಬಳಿಕ ಲೀಟರ್ ಪೆಟ್ರೋಲ್ ಬೆಲೆ 97.77 ರೂ ಹಾಗೂ ಡೀಸೆಲ್ ಬೆಲೆ 90.67 ರೂ ದಾಖಲಾಗಿದೆ.

ಇನ್ನು, ಕೋಲ್ಕತ್ತಾದಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 3.29 ರೂ. ಹೆಚ್ಚಳವಾಗಿ 108.74 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಲೀಟರ್‌ಗೆ 3.11 ರೂ.ಗಳಷ್ಟು ಏರಿಕೆಯಾಗಿ 95.13 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 3.14 ರೂ. ಏರಿಕೆಯಾಗಿ 106.68 ರೂ.ಗೆ ತಲುಪಿದೆ, ಡೀಸೆಲ್ ಬೆಲೆ ಈಗ ಲೀಟರ್‌ಗೆ 3.11 ರೂ. ಏರಿಕೆಯಾಗಿ 93.14 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2.83 ರೂ. ಏರಿಕೆಯಾಗಿ 103.67 ರೂ.ಗೆ ತಲುಪಿದೆ ಮತ್ತು ಡೀಸೆಲ್ ದರ ಲೀಟರ್‌ಗೆ 2.86 ರೂ. ಏರಿಕೆಯಾಗಿ 95.25 ರೂ.ಗೆ ತಲುಪಿದೆ.

ಇದನ್ನೂ ಓದಿ : ಮದ್ಯ ಖರೀದಿಗೆ 21 ವರ್ಷ ಕಡ್ಡಾಯ – ಸಿಎಂ ವಿಜಯ್ ಸರ್ಕಾರ ಆದೇಶ!

Btv Kannada
Author: Btv Kannada

Leave a Comment

Read More