ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ!

ಬೆಂಗಳೂರು : ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯು ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರವು ಮೇ 11 ರಿಂದ ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯನ್ನು ಜಾರಿಗೊಳಿಸಿದ್ದು, ಇದರಿಂದ ಪ್ರೀಮಿಯಂ ಬಿಯರ್ ಹಾಗೂ ಸ್ಕಾಚ್ ವಿಸ್ಕಿಗಳ ಬೆಲೆ ಇಳಿಕೆಯಾಗಿದೆ. 

ಪ್ರೀಮಿಯಂ ಬಿಯರ್, ಸ್ಕಾಚ್ ವಿಸ್ಕಿಗಳ ಬೆಲೆ ಕಡಿಮೆಯಾಗಿದ್ದು, ಸಾಮಾನ್ಯ ಜನರು ಬಳಸುವ ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ.

ಹೊಸ ನೀತಿಯನ್ವಯ ಶೇ 5ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಶೇ 20 ರಿಂದ 25 ರಷ್ಟು ಇಳಿಕೆಯಾಗಿದೆ. ಕಿಂಗ್‌ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಮೇಲೆ ಸುಮಾರು 75 ರೂ. ಇಳಿಕೆಯಾಗಿದ್ದರೆ, ಹೈನೆಕೆನ್ ಮೇಲೆ 70 ರೂ., ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂ. ಹಾಗೂ ಬಡ್‌ವೈಸರ್ ಪ್ರೀಮಿಯಂ ಮೇಲೆ 20 ರೂ.ಗಳವರೆಗೆ ರಿಯಾಯಿತಿ ಸಿಗಲಿದೆ.

ಬಿಯರ್ ಮಾತ್ರವಲ್ಲದೆ, ವಿದೇಶಿ ಬ್ರಾಂಡ್‌ನ ಸ್ಕಾಚ್ ವಿಸ್ಕಿಗಳ ಬೆಲೆಯೂ ಶೇ. 20 ರಷ್ಟು ಕಡಿಮೆಯಾಗಿದೆ. ಉದಾಹರಣೆಗೆ, ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್‌ನ 750 ಎಂಎಲ್ ಬಾಟಲಿಯ ಬೆಲೆ 5,190 ರೂ.ಗಳಿಂದ 4,100 ರೂ.ಗೆ ಇಳಿದಿದೆ. ಇದು ಶ್ರೀಮಂತ ವರ್ಗದ ಮದ್ಯಪ್ರಿಯರಿಗೆ ದೊಡ್ಡ ಸಮಾಧಾನ ತಂದಿದೆ.

ಇದನ್ನೂ ಓದಿ : ವಿಜಯಪುರದಲ್ಲಿ ಭಾರೀ ಮಳೆಗೆ ಮನೆ ಮೇಲ್ಛಾವಣಿ ಕುಸಿತ – ಒಂದೇ ಕುಟುಂಬದ ನಾಲ್ವರು ದುರ್ಮರಣ!

Btv Kannada
Author: Btv Kannada

Leave a Comment

Read More

Read More