ಬೆಂಗಳೂರಿಗರಿಗೆ ಗುಡ್‌ನ್ಯೂಸ್ – ಮೇ.16 ರಿಂದ ಬೃಹತ್ ಇ-ಖಾತಾ ಮೇಳ ಆರಂಭ!

ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಜಿಬಿಎ ಇ-ಖಾತಾ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು, ಮೇ 16ರಿಂದ ಬೃಹತ್ ಇ- ಖಾತಾ ಮೇಳ ನಡೆಸಲಿದೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಇ-ಖಾತಾ ಮೇಳ ನಡೆಯಲಿದ್ದು, 25 ಲಕ್ಷ ಖಾತಾಗಳನ್ನ ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದೆ. ಮೇ 16ರ ನಂತರ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಸಲಿದ್ದು, ಬೆಂಗಳೂರಿಗರು ಅಗತ್ಯ ದಾಖಲೆಗಳನ್ನ ತೆಗೆದುಕೊಂಡು ಇ-ಖಾತಾಗೆ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.

25 ಲಕ್ಷ ಆಸ್ತಿಯನ್ನು ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ 10 ಲಕ್ಷ ಇ-ಖಾತಾ ವಿತರಿಸಲಾಗಿದೆ. ಇ-ಖಾತಾ ಮೇಳದಲ್ಲಿ ನೇರವಾಗಿ ಸಾರ್ವಜನಿಕರು ಇ-ಖಾತಾ ಪಡೆಯಬಹುದು. ಈ ಮೇಳದಲ್ಲಿ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪ ಇರಲ್ಲ. ಲಂಚದ ಬೇಡಿಕೆಗೂ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇ-ಖಾತಾ ಪಡೆಯಲು ಕೆಲವು ಪ್ರಮುಖ ದಾಖಲೆಗಳು ಕಡ್ಡಾಯವಾಗಿದ್ದು, ಸೇಲ್ ಡೀಡ್ ಅಥವಾ ಟೈಟಲ್ ಡೀಡ್, ಪ್ರಾಪರ್ಟಿ ಟ್ಯಾಕ್ಸ್ ರಸೀದಿ, ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ, ಆಧಾರ್ ಕಾರ್ಡ್, ಇ-ಕೆವೈಸಿ, ಇಸಿ, ಬೆಸ್ಕಾಂ ಬಿಲ್ ಹಾಗೂ ಆಸ್ತಿಯ ಜಿಪಿಎಸ್ ಲೊಕೆಷನ್ ಅಗತ್ಯವಿದೆ.

ಇದನ್ನೂ ಓದಿ : ಮುಖ್ಯಮಂತ್ರಿ ಸಚಿವಾಲಯದ ವಿಶೇಷ ಅಧಿಕಾರಿಯನ್ನಾಗಿ ಜ್ಯೋತಿಷಿ ರಾಧನ್ ಪಂಡಿತ್ ನೇಮಿಸಿದ ಸಿಎಂ ವಿಜಯ್!

Btv Kannada
Author: Btv Kannada

Leave a Comment

Read More