ನಾಳೆ ಸಚಿವ ಡಿ. ಸುಧಾಕರ್ ಅಂತ್ಯಕ್ರಿಯೆ!

ಚಿತ್ರದುರ್ಗ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಯೋಜನೆ ಮತ್ತು ಸಾಂಖಿಕ‌ ಇಲಾಖೆ ಸಚಿವ ಡಿ. ಸುಧಾಕರ್ ಅವರು ಇಂದು ನಿಧನರಾಗಿದ್ದಾರೆ. 

ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಡಿ ಸುಧಾಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 3:15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸಚಿವ ಡಿ ಸುಧಾಕರ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 12:00 ರಿಂದ 04:00 ಗಂಟೆಯವರೆಗೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತೆ.

ನಂತರ ಚಳ್ಳಕೆರೆಯ ಸ್ವಗೃಹದಲ್ಲಿ ಪೂಜೆ ವಿಧಿ-ವಿಧಾನಗಳು ನಡೆಯಲಿದೆ. ಬಳಿಕ ಚಳ್ಳಕೆರೆಯಲ್ಲಿರುವ ಡಿ. ಸುಧಾಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತೆ.

ಇನ್ನು ನಾಳೆ ಮಧ್ಯಾಹ್ನ 03:00 ರಿಂದ 04:00 ಗಂಟೆಯವರೆಗೆ ಸಚಿವ ಡಿ ಸುಧಾಕರ್ ಅವರ ಅಂತ್ಯಕ್ರಿಯೆ ವಿಧಿ-ವಿಧಾನಗಳು ನಡೆಯಲಿವೆ.

ಇದನ್ನೂ ಓದಿ : ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 3ನೇ ಸ್ಥಾನ – ಮಹಾರಾಷ್ಟ್ರ ಪ್ರಥಮ, ತಮಿಳುನಾಡಿಗೆ 2ನೇ ಸ್ಥಾನ!

Btv Kannada
Author: Btv Kannada

Leave a Comment

Read More