ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುಗ ಆರಂಭವಾಗಿದೆ. ಇಂದು ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸುವೇಂದು ಅಧಿಕಾರಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ವೇದಿಕೆಗೆ ಆಗಮಿಸಿದ ಮೋದಿ ಅವರು 98 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತರೊಬ್ಬರ ಪಾದಮುಟ್ಟಿ ನಮಸ್ಕರಿಸಿದರು.
ಮೋದಿ ಅವರು ಹಿರಿಯ ಕಾರ್ಯಕರ್ತರೊಬ್ಬರಿಗೆ ತೋರಿದ ಗೌರವ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮಖನ್ ಲಾಲ್ ಸರ್ಕಾರ್ ಅವರಿಗೆ ಪ್ರಧಾನಿ ಮೋದಿ ಅವರು ಶಾಲು ಹೊದಿಸಿ ಗೌರವಿಸಿ, ಪ್ರೀತಿಯ ಅಪ್ಪುಗೆ ನೀಡಿ ಶುಭಹಾರೈಸಿದರು. ಈ ಬೆನ್ನಲ್ಲೇ ಪ್ರಧಾನಿಗಳೇ ಪಾದಮುಟ್ಟಿ ನಮಸ್ಕರಿಸಿದ ಮಖನ್‌ಲಾಲ್ ಸರ್ಕಾರ್ ಯಾರು? ಅನ್ನೋ ಕುತೂಹಲ ಹೆಚ್ಚಾಗಿದೆ.
98 ವರ್ಷದ ಮಖನ್‌ಲಾಲ್ ಸರ್ಕಾರ್ ಸರ್ಕಾರ್ ಅವರನ್ನು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯವಾದಿ ಚಳವಳಿಯಲ್ಲಿ ತೊಡಗಿಸಿಕೊಂಡ ಆರಂಭಿಕ ಹಾಗೂ ತಳಮಟ್ಟದ ಕಾರ್ಯಕರ್ತರಲ್ಲಿ ಒಬ್ಬರು.
1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದರು. ಇನ್ನು 1981 ರಿಂದ ಸತತ 7 ವರ್ಷಗಳ ಕಾಲ ಅವರು ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ : ಬಿಟ್ ಕಾಯಿನ್ ಹಗರಣ – ಆರೋಪಿ ಶ್ರೀಕಿ ಸೇರಿ ಮೂವರು ಅರೆಸ್ಟ್!








