ಚೆನ್ನೈ: ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಸರ್ಕಾರದ ರಚನೆ ಕಸರತ್ತು ಮತ್ತೊಮ್ಮೆ ವಿಫಲವಾಗಿದೆ. ಬಹುಮತಕ್ಕೆ 2 ಸ್ಥಾನಗಳ ಕೊರತೆಯಿದ್ದು, ಇಂದು ಕೂಡ ದಳಪತಿ ವಿಜಯ್ ಪದಗ್ರಹಣ ಡೌಟ್ ಎನ್ನಲಾಗುತ್ತಿದೆ.
ತಮಿಳುನಾಡು ವಿಧಾನಸಭೆಯ ಒಟ್ಟು ಬಲ 234. ಅಧಿಕಾರದ ಗದ್ದುಗೆ ಏರಲು ಬೇಕಾದ ಮ್ಯಾಜಿಕ್ ನಂಬರ್ 118. ಆದರೆ, ನಿನ್ನೆ ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಜೆ ಅಧ್ಯಕ್ಷ ವಿಜಯ್, ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ಪತ್ರ ಸಲ್ಲಿಸಿದ್ದಾರೆ. ಕೇವಲ ಎರಡು ಸ್ಥಾನಗಳ ಅಂತರ ವಿಜಯ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಟಿವಿಕೆ ಅಧ್ಯಕ್ಷ ವಿಜಯ್ ನಿನ್ನೆ ರಾಜಭವನದಲ್ಲಿ ರಾಜ್ಯಪಾಲ ಆರ್.ವಿ ಅರ್ಲೇಕರ್ ಅವರನ್ನ ಭೇಟಿಯಾಗಿ, ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ಪತ್ರ ಸಲ್ಲಿಸಿದ್ದಾರೆ. ಆದರೆ ವಿಜಯ್ ಪಕ್ಷಕ್ಕೆ ಇನ್ನೂ 2 ಸ್ಥಾನಗಳ ಕೊರತೆ ಇರುವುದು ಕಂಡುಬಂದಿದೆ. ಹಾಗಾಗಿ ದಳಪತಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ಇಂದೂ ಕೂಡ ಅನುಮಾನವಾಗಿದೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ – ಇಂದು ಪ್ರಮಾಣ ವಚನ!








