ಬೆಂಗಳೂರು : ಕೆಡಿ ದಿ ಡೆವಿಲ್ ಚಿತ್ರದ ‘ಸರ್ಸೆ ನಿನ್ನ ಸೆರಗ’ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ನಟಿ ನೋರಾ ಫತೇಹಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಬಳಿಕ ನಟಿ ನೋರಾ ಫತೇಹಿ ಮಾತನಾಡಿ, ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಅನಿವಾರ್ಯವಾಗಿ ಅಂತಹ ಸಂದರ್ಭ ಎದುರಾಗಿತ್ತು. ಆದರೆ ಒಬ್ಬ ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು, ನನ್ನಿಂದ ತಪ್ಪಾಗಿದೆ ಎಂದಿದ್ದಾರೆ.
ಇದೇ ವೇಳೆ ಅನಾಥ ಬಾಲಕಿಯರ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವುದಾಗಿ ಘೋಷಿಸಿ, “ಇದು ಸಮಾಜಕ್ಕೆ ಮರಳಿ ಕೊಡುವ ನನ್ನ ಪ್ರಯತ್ನ” ಎಂದು ಹೇಳಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಮನೋಭಾವದಿಂದ ಕೆಲ ಅನಾಥ ಬಾಲಕಿಯರ ಶಿಕ್ಷಣದ ವೆಚ್ಚವನ್ನು ಭರಿಸುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.
ಸಮಾಜಕ್ಕೆ ಏನಾದರೂ ಮರಳಿ ನೀಡುವುದು ಬಹಳ ಮುಖ್ಯ. ಆದ್ದರಿಂದ ಕೆಲವು ಅನಾಥ ಬಾಲಕಿಯರ ಶಿಕ್ಷಣವನ್ನು ಪ್ರಾಯೋಜಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : 10 ಸಾವಿರ ಉಚಿತ ಟಿಕೆಟ್ ಬೇಡಿಕೆಯಿಂದಲೇ IPL ಫೈನಲ್ ಶಿಫ್ಟ್ – BCCI ಕಾರ್ಯದರ್ಶಿ ಸ್ಪಷ್ಟನೆ!








