ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಮುಂದಿನ ಜೂನ್ 14 ರಿಂದ 24ರ ಒಳಗೆ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎ ಸಂಗ್ರೇಶಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎ ಸಂಗ್ರೇಶಿ ಮಾತನಾಡಿ, ಜೂನ್ 14 ರಿಂದ 24 ರ ಒಳಗೆ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ. ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಸಮಾಲೋಚಿಸಿ ದಿನಾಂಕ ನಿಗದಿಯಾಗಬೇಕು ಅನ್ನೋ ಕಾನೂನು ಇತ್ತು. ಆದಕಾರಣ ಇಂದು ಸಭೆ ನಡೆಸಿದ್ದೇವೆ. ಚುನಾವಣೆ ನಡೆಸಲು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ದಿನಾಂಕ ನಿಗದಿ ಮಾತ್ರ ಬಾಕಿ ಅನ್ನೋದು ಜಿಬಿಎಯೂ ತಿಳಿಸಿದೆ. ಜನಗಣತಿ, ಮನೆ ಸೇರಿದಂತೆ ಅನೇಕ ಕಾರ್ಯ ಇರೋದ್ರಿಂದ ಸಮಯ ನೋಡಿ ದಿನಾಂಕ ನಿಗದಿ ಪಡಿಸಿ ಅಂತಾ ಜಿಬಿಎಗೆ ಹೇಳಿದೆ. ಆದ್ರೆ ವೇಳಾಪಟ್ಟಿ ನೋಡಲು ಸಾಧ್ಯವಿಲ್ಲ. ಜೂನ್ -30 ರೊಳಗೆ ಚುನಾವಣೆ ದಿನಾಂಕ ನಿಗದಿ ಪಡಿಸಬೇಕು ಅಂತಾ ಹೇಳಿದ್ದೇವೆ. ಸುಪ್ರೀಂ ಕೋರ್ಟ್ಗೆ ನಾವು ಇದನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.
ಇನ್ನು ಗೊತ್ತುಪಡಿಸಿದ ಅವಧಿಯಲ್ಲಿ ದಿನಾಂಕ ನಿಗದಿಪಡಿಸುವಂತೆ ತಿಳಿಸಿದ್ದೇನೆ, ಆದ್ರೆ ಚುನಾವಣೆ ಮುಂದೂಡುವ ಅಧಿಕಾರ ನಮಗಿಲ್ಲ. ಜೂನ್ – 14 ರಿಂದ 24 ರೊಳಗಿನ ಡೇಟ್ ಫಿಕ್ಸ್ ಮಾಡಿ ಅಂತಷ್ಟೇ ಹೇಳಿದ್ದೇವೆ ಎಂದು ಜಿ.ಎ ಸಂಗ್ರೇಶಿ ತಿಳಿಸಿದರು.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಬಿಎಸ್ವೈ ಬಳಸಿದ್ದ ಅಂಬಾಸಿಡರ್ ಕಾರು ಪ್ರದರ್ಶನ!








