ಅಣ್ಣಾವ್ರ ಸ್ಮಾರಕದ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಚೇತನ್‌ – ಸಾರಾ ಗೋವಿಂದ್ ಬೆಂಬಲಕ್ಕೆ ನಿಂತ ಕನ್ನಡ ಪರ ಹೋರಾಟಗಾರರು!

ಬೆಂಗಳೂರು : ಡಾ. ರಾಜ್​ಕುಮಾರ್ ಸ್ಮಾರಕದ ಬಗ್ಗೆ ನಟ ಚೇತನ್ ಅಹಿಂಸಾ ಮಾಡಿದ್ದ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚೇತನ್ ಅಹಿಂಸ ನಡೆಯನ್ನು ರಾಜ್​ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಇದೀಗ ಸಾರಾ ಗೋವಿಂದ್ ಅವರ ಜೊತೆ ಇಡೀ ಕನ್ನಡಪರ ಹೋರಾಟಗಾರರು ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಭೈರಪ್ಪ ಹರೀಶ್ ಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಜಾಗೃತಿಗಾಗಿ ಬೀದಿ ನಾಟಕ ಮಾಡುವ ಪ್ರತಿಭೆಗಳು ಅದ್ಭುತವಾಗಿ ನಟನೆ ಮಾಡುತ್ತಾರೆ. ಅದರ 5% ನಟನೆ ಬಾರದ ಅಯೋಗ್ಯ ಚೇತನ್ ವರನಟ ರಾಜಕುಮಾರ್ ರವರ ಸಾವಿನ ಬಗ್ಗೆ ಅವರ ದೇಹವನ್ನು ಸಾರ್ವಜನಿಕ ಸ್ಥಳದಲ್ಲಿ ಇರಿಸಿರುವ ಬಗ್ಗೆ ತಕರಾರು ಎತ್ತುತ್ತಾನೆ. ಅಂದರೆ ಈ ನಾಡಿನ ಪರಂಪರೆ ಕನ್ನಡ ಅಸ್ಮಿತೆಗಾಗಿ ದುಡಿದ ಮಹನೀಯರ ಬಗ್ಗೆ ಜೊತೆಗೆ ಕನ್ನಡ ಚಿತ್ರರಂಗವನ್ನು ಕನ್ನಡಿಕರಣ ಗೊಳಿಸುವುದರ ಜೊತೆಗೆ ಇಡೀ ತಮ್ಮ ಜೀವನವೇ ಕನ್ನಡಕ್ಕಾಗಿ ಮುಡಿಪಿಟ್ಟ ವ್ಯಕ್ತಿಯ ಬಗ್ಗೆ ಇಷ್ಟು ಲಗುವಾಗಿ ಹಗುರ ಮಾತುಗಳನ್ನು ಮಾತನಾಡಿರುವುದು ಅಕ್ಷಮ್ಯ. ಇಂತಹ ನಡೆಯನ್ನು ಮೊದಲು ಖಂಡಿಸಿ ಇವನ ತಲೆಗೆ ಎರಡು ವಿಚಾರಗಳಿಂದ ಮಟುಕಬೇಕಾದ ಜನ ಇಂದು ಸಾರ ಗೋವಿಂದರವರೇ ಪುನಹ ಕ್ಷಮೆ ಕೇಳಬೇಕು ಎಂಬ ಉದ್ಧಟತನದ ಮಾತುಗಳು ನೋಡಿದರೆ ಇವರ ಬೌದ್ಧಿಕ ದಿವಾಳಿತನ ಪ್ರದರ್ಶನವಾಗುತ್ತಿದೆ ಅಷ್ಟೇ ಎಂದು ಭೈರಪ್ಪ ಹರೀಶ್ ಕುಮಾರ್ ಕಿಡಿ ಕಾರಿದ್ದಾರೆ.

ಸಾರಾ ಗೋವಿಂದ್ ರವರ ಕೆಲ ಪದ ಬಳಕೆ ಆಕ್ಷೇಪ ಅರ್ಹ ಅಷ್ಟೇ ವಿನಹ ಸಾರಾ ಗೋವಿಂದ್ ರವರ ಅಷ್ಟು ಆಕ್ರೋಶ ಸರಿಯಾದ ದಾರಿಯಲ್ಲಿದೆ. ಸಾರ ಗೋವಿಂದ್ ರವರ ಇತಿಹಾಸ ಗೊತ್ತೇನೋ ಅವರ ಹೋರಾಟದ ಹೆಜ್ಜೆಗಳು ನಿನ್ನ ಜೀವಮಾನದಲ್ಲಿ ಮಾಡಲು ಸಾಧ್ಯವಿಲ್ಲ, ಸಾರ ಗೋವಿಂದ್ ರವರ ಜಾಗದಲ್ಲಿ ನಾನಿದ್ದಿದ್ದರೆ ಅದರ ಕಥೆ ಬೇರೆ ಇರುತ್ತಿತ್ತು ಒಂದು ಹೆಚ್ಚುವರಿ ಮತ್ತೊಂದು ಪ್ರಕರಣ ಎದುರಿಸಲು ನಾನು ಸಿದ್ಧವಾಗಿರುತ್ತದೆ ಆದರೆ ನಾಡಿನ ಅಸ್ಮಿತೆಗಳ ವಿಚಾರದಲ್ಲಿ ಲಘು ಮಾತುಗಳು ಮಾತನಾಡಿದವನನ್ನು ಯಾವುದೇ ಕಾರಣಕ್ಕೂ ಬಿಡುತ್ತಿರಲಿಲ್ಲ ಎಂದಿದ್ದಾರೆ.

ಈಗ ಮುಗಿದಿದೆ ಈಗ ಕಾನೂನಿನ ಅಡಿಯಲ್ಲೇ ನಾವು ಆಟ ತೋರಿಸುತ್ತೇವೆ. ಕೇಂದ್ರ ಗ್ರಹ ಇಲಾಖೆ ಇವನನ್ನು ಗಡಿ ಪಾರು ಮಾಡಿದೆ ಅದನ್ನು ಮತ್ತೆ ಉಲ್ಲಂಘನೆ ಮಾಡಿ ಕರುನಾಡನಲ್ಲಿ ಜನರ ಸಾಮರಸ್ಯವನ್ನು ಕೆಡಿಸುತ್ತಿದ್ದಾನೆ. ಇವನನ್ನು ಈ ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಗ್ರಹ ಇಲಾಖೆಗೆ ಗಡಿಪಾರು ಮಾಡಲು ಶಿಫಾರಸ್ಸು ಮಾಡಬೇಕು. ಇಲ್ಲವಾದರೆ ಇಡೀ ಕನ್ನಡ ಸಮೂಹದ ಪ್ರತಿರೋಧ ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಭೈರಪ್ಪ ಹರೀಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

ಈತ ಈ ರೀತಿಯ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮಾತನಾಡಿ ನನಗೆ ಅಭ್ರುತೆ ಇದೆ ಎಂದು ಬಿಂಬಿಸಿ ಪೋಲಿಸ್ ರಕ್ಷಣೆ ಹಾಗೂ ಗನ್ ಮ್ಯಾನ್ ಪಡೆಯುವ ತಂತ್ರ ಇವನದಾಗಿದೆ ನಂತರ ಅದನ್ನು ಜನರ ಮುಂದೆ ಶೋಕಿ ಮಾಡುವ ದುಷ್ಟ ಚಟ ಕೂಡ ಈತನದಾಗಿದೆ.

ಇವನು ದೊಡ್ಡ ಹೋರಾಟಗಾರ ಎಂದು ಬಿಲ್ಡಪ್ ಕೊಡ್ತಾನಲ್ಲ ಇವನು ರೂಪಿಸಿರುವ ಒಂದೇ ಒಂದು ಹೋರಾಟ ಜನರ ಮುಂದೆ ಇಡಲಿ ನೋಡೋಣ. ಈತನ ಜೀವನವೇ ಮತ್ತೊಬ್ಬರು ರೂಪಿಸಿದ ಹೋರಾಟಕ್ಕೆ ಹೋಗಿ ವೇದಿಕೆ ಕಬಳಿಸಿ ಭಾಷಣ ಬಿಗಿದು ಆ ಹೋರಾಟವನ್ನೇ ತಾನು ಮಾಡಿದೆ ಎಂದು ಬಿಲ್ಡಪ್ ಕೊಡುವ ನಾಲಾಯಕ್ ಇವನು. ಇವನಿಂದ ಸಮಾಜಕ್ಕೆ ಎಳ್ಳಷ್ಟು ಪ್ರಯೋಜನವಿಲ್ಲ ಬರಿ ದ್ವೇಷವನ್ನೇ ಹರಡುತ್ತಾನೆ ಎಂದು ಗುಡುಗಿದ್ದಾರೆ.

ಲೋ.. ಚೇತನ್ ಅದೇನು ಕಾನೂನು ಹೋರಾಟದ ಮಾಡ್ತೀನಿ ಅಂತಿದ್ದಲ್ಲ ಮಾಡು ನೋಡೋಣ, ನಿನಗೆ ಹೇಗೆ ದೇಶ ಬಿಡಿಸಬೇಕು ಎಂದು ನಾವು ಮಾಡಿ ತೋರಿಸುತ್ತೇವೆ ಈ ಸ್ಟೇಟಸ್ ಅನ್ನ ಸೇವ್ ಮಾಡಿ ಇಟ್ಕೋ. ರಾಜಣ್ಣ ಕೇವಲ ನಟನಲ್ಲ.. ಒಂದು ಭಾಷೆಯ ಆತ್ಮಗೌರವ.. ಒಂದು ಜನಾಂಗದ ಉಸಿರು.. ಒಂದು ಸಂಸ್ಕೃತಿಯ ಶಿರೋಮಣಿ ಎಂದು ಭೈರಪ್ಪ ಹರೀಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್​!

Btv Kannada
Author: Btv Kannada

Leave a Comment

Read More

Read More