ಇಂದು ದೆಹಲಿಯಲ್ಲಿ RCB vs DC ಪಂದ್ಯ – ಇತಿಹಾಸ ರಚಿಸಲು ರೆಡಿಯಾದ ವಿರಾಟ್ ಕೊಹ್ಲಿ!

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ಪ್ಲೇಆಫ್ ತಲುಪುವ ಸ್ಪರ್ಧೆಯು ತೀವ್ರಗೊಳ್ಳುತ್ತಿರುವುದರಿಂದ ಪಂದ್ಯಾವಳಿಯು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಾಂಪ್ರದಾಯಿಕ ಎದುರಾಳಿ RCBಯನ್ನು ಸೋಲಿಸಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತವರು ನೆಲದಲ್ಲಿ ಅವರನ್ನು ಸೋಲಿಸಲು RCB ಸಾಕಷ್ಟು ತಂತ್ರ ರೂಪಿಸಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಐಪಿಎಲ್ 2026ರ ಮೊದಲ ರಿವರ್ಸ್ ಪಂದ್ಯವಾಗಿದೆ.

ಏ.19 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ, ಕ್ಯಾಪಿಟಲ್ಸ್ ತಂಡವು ಕೊನೆಯ ಓವರ್‌ನಲ್ಲಿ ಆರು ವಿಕೆಟ್‌ಗಳಿಂದ ರೋಮಾಂಚಕ ಗೆಲುವು ಸಾಧಿಸಿತು. ಇಂದು ಡೆಲ್ಲಿ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ಮುಂದಾಗಿದೆ.

ಈ ಪಂದ್ಯದಲ್ಲಿ ಅನೇಕ ವೈಯಕ್ತಿಕ ಸಾಧನೆಗಳು ಪಣಕ್ಕಿಡಲಾಗಿದೆ, ಈ ಪೈಕಿ ದೊಡ್ಡ ಆಕರ್ಷಣೆ ಕಿಂಗ್ ಕೊಹ್ಲಿ. ಪ್ರಸಿದ್ಧ ದೆಹಲಿ ಪಿಚ್‌ನಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಶಾಶ್ವತವಾಗಿಡಲು ಕೆಲವು ದಾಖಲೆಗಳನ್ನು ಸ್ಥಾಪಿಸುವ ಹೊಸ್ತಿಲಲ್ಲಿದ್ದಾರೆ.

ಇದನ್ನೂ ಓದಿ : RCB ಪಂದ್ಯದಂದೇ 240 ಸಿಸಿಟಿವಿ ಆಫ್ – ಚಿನ್ನಸ್ವಾಮಿಯಲ್ಲಿ ಭಾರೀ ಭದ್ರತಾ ಲೋಪ!

Btv Kannada
Author: Btv Kannada

Leave a Comment

Read More

Read More