ಬಮೂಲ್ ನಿರ್ದೇಶಕ ಕಡತನಮಲೆ ಸತೀಶ್ ಸದಸ್ಯತ್ವ ರದ್ದು – ಸ್ಫೋಟಕ ಹೇಳಿಕೆ ನೀಡಿದ JDS ಮುಖಂಡ ನೆಲಕುಂಟೆ ಸತೀಶ್!

ಬೆಂಗಳೂರು : ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಕಡತನಮಲೆ ಸತೀಶ್ ಸದಸ್ಯತ್ವ ರದ್ದಾಗಿರುವ ಹಿಂದೆ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಕೈವಾಡವಿದೆ ಎಂಬ ವದಂತಿಗಳಿಗೆ ಇದೀಗ ಜೆಡಿಎಸ್ ಮುಖಂಡ ನೆಲಕುಂಟೆ ಸತೀಶ್ ತೆರೆ ಎಳೆದಿದ್ದಾರೆ.

ಬಮೂಲ್ ನಿರ್ದೇಶಕ ಕಡತನಮಲೆ ಸತೀಶ್ ಸದಸ್ಯತ್ವ ರದ್ದು ವಿಚಾರ ಸಂಬಂಧ ಈಗ ಜೆಡಿಎಸ್ ಮುಖಂಡ ನೆಲಕುಂಟೆ ಸತೀಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಯಲಹಂಕ ಶಾಸಕ ವಿಶ್ವನಾಥ್​ಗೂ ಇದಕ್ಕೂ ಸಂಬಂಧ ಇಲ್ಲ, ಬಮೂಲ್ ಚುನಾವಣೆ ಸಂದರ್ಭದಲ್ಲಿ ಕಡತನಮಲೆ ಸತೀಶ್​ಗೆ ಸಾಥ್ ನೀಡುವಂತೆ ಶಾಸಕರು ನನ್ನ ಬಳಿ ಕೇಳಿದ್ದರು. ನಮ್ಮ ಮನೆಗೆ ಬಂದು ಸಾಥ್ ನೀಡುವಂತೆ ಕೇಳಿದ್ದರು. ಆದರೆ ನಾನು ಇಂತಹ ವ್ಯಕ್ತಿಗೆ ಸಾಥ್ ನೀಡುವುದಿಲ್ಲ ಎಂದಿದ್ದೆ. ಶಾಸಕರು ಸಹ ಯಾವ ವಿಚಾರದಲ್ಲೂ ದುಡುಕುವಂತಹವರಲ್ಲ, ಆದರೆ ಕಡತನಮಲೆ ಸತೀಶ್ ವಿಚಾರದಲ್ಲಿ ದುಡುಕಿದ್ದಾರೆ. ಕಡತನಮಲೆ ಸತೀಶ್ ಅಮಾನತ್ತು ವಿಚಾರದಲ್ಲಿ ಸಂಪೂರ್ಣ ಪಾತ್ರ ನನ್ನದೆ ಎಂದು ನೆಲಕುಂಟೆ ಸತೀಶ್ ಹೇಳಿದ್ದಾರೆ.

ಇನ್ನು ಕೋರ್ಟ್ ವಿಚಾರ ಸಂಬಂಧ ಮಾತನಾಡಿ, ಬಮೂಲ್ ಚುನಾವಣೆ ಸಂದರ್ಭದಲ್ಲಿ ಕಡತಮಲೆ ಸತೀಶ್ ಅಕ್ರಮವಾಗಿ ನಡೆಸಿದ್ದ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಅರ್ಜಿ ನೀಡಿದ್ದೆ ಎಂದಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದ್ದರು. ಈ ನಡುವೆ ಕಡತನಮಲೆ ಸತೀಶ್ ಹೈಕೋರ್ಟ್ ಮೆಟ್ಟಿಲೇರಿದ್ದು, ಆದೇಶ ರದ್ದು ಮಾಡಿ ಪುನರ್ ವಿಚಾರಣೆ ಮಾಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ : ಅಣ್ಣಾವ್ರ ಸ್ಮಾರಕದ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಚೇತನ್‌ – ಸಾರಾ ಗೋವಿಂದ್ ಬೆಂಬಲಕ್ಕೆ ನಿಂತ ಕನ್ನಡ ಪರ ಹೋರಾಟಗಾರರು!

Btv Kannada
Author: Btv Kannada

Leave a Comment

Read More

Read More