ಬೆಂಗಳೂರು : 2025-26ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಸುದ್ದಿಗೋಷ್ಠಿ ನಡೆಸಿ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್ಎಸ್ಎಲ್ಸಿಯಲ್ಲಿ ಶೇ.94.1 ಮಂದಿ ಪಾಸ್ ಆಗಿದ್ದಾರೆ.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಜಿಲ್ಲಾವಾರು ಫಲಿತಾಂಶ :
- ದಕ್ಷಿಣ ಕನ್ನಡ ಜಿಲ್ಲೆ- 98.40%
- ಉಡುಪಿ – 98.18%
- ಉತ್ತರ ಕನ್ನಡ- 98.09%
- ಹಾಸನ- 97.51%
- ಮಂಡ್ಯ- 97.45%
- ಶಿರಸಿ- 97.21%
- ಹಾವೇರಿ- 96.87%
- ಕೊಡಗು- 96.70%
- ಶಿವಮೊಗ್ಗ- 96.56%
- ವಿಜಯನಗರ- 96.39%
- ಬೆಂಗಳೂರು ಗ್ರಾಮಾಂತರ – 95.84%
- ಧಾರವಾಡ – 95.59%
- ಕೋಲಾರ- 95.50%
- ಬಾಗಲಕೋಟೆ- 95.42%
- ಬೆಂಗಳೂರು ಉತ್ತರ- 95.34%
- ಗದಗ- 95.24%
- ಚಿಕ್ಕಮಗಳೂರು- 94.99%
- ಬೆಳಗಾವಿ – 94.75%
- ದಾವಣಗೆರೆ- 94.64%
- ಮೈಸೂರು- 94.50%
- ರಾಯಚೂರು- 94.41%
- ವಿಜಯಪುರ- 94.17%
- ಚಿಕ್ಕೋಡಿ- 94.09%
- ಬಳ್ಳಾರಿ- 93.36%
- ಕೊಪ್ಪಳ- 93.10%
- ರಾಮನಗರ- 92.83%
- ಚಿತ್ರದುರ್ಗ- 92.25%
- ಬೀದರ್- 92.18%
- ತುಮಕೂರು- 92.04%
- ಚಾಮರಾಜನಗರ- 91.89%
- ಯಾದಗಿರಿ- 91.89%
- ಬೆಂಗಳೂರು ದಕ್ಷಿಣ- 91.65%
- ಚಿಕ್ಕಬಳ್ಳಾಪುರ- 90.88%
- ಮಧುಗಿರಿ- 90.26%
- ಕಲಬುರಗಿ-85.06%
ಇದನ್ನೂ ಓದಿ : ಕರ್ನಾಟಕ SSLC ಫಲಿತಾಂಶಕ್ಕೆ ಕ್ಷಣಗಣನೆ – ರಿಸಲ್ಟ್ ನೋಡುವುದು ಹೇಗೆ?
Author: Btv Kannada
Post Views: 116








