ಕರವೇ ನಾರಾಯಣ ಗೌಡರಿಗೆ ನಿಂದನೆ – ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ FIR.. ಯಾವುದೇ ಕ್ಷಣ ಅರೆಸ್ಟ್ ಸಾಧ್ಯತೆ!

ಬೆಂಗಳೂರು : ಕರವೇ ನಾರಾಯಣ ಗೌಡ ಅವರಿಗೆ ಅವಾಚ್ಯ ನಿಂದನೆ, ಬೆದರಿಕೆ ಹಾಕಿರುವ ಆರೋಪದ ಮೇಲೆ ಮಹೇಶ್ ವಿಕ್ರಮ್ ಹೆಗ್ಡೆ ಸೇರಿದಂತೆ ಮೂವರ ವಿರುದ್ಧ FIR ದಾಖಲಾಗಿದೆ.

ನಾರಾಯಣ ಗೌಡರು ಹಿಂದಿ ಭಾಷೆ ವಿರುದ್ಧ ಮಾತಾಡಿದ್ದರು, ಅಲ್ಲದೇ ರಾಜಭವನ ಮುತ್ತಿಗೆಗೆ ಕರೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಈ ಸಂಬಂಧ ಮಹೇಶ್ ವಿಕ್ರಮ್ ಹೆಗ್ಡೆ, ಮುರುಳೀದರ್, ಸುಭಾಷ್ ಮಾಲಿ ಎಂಬುವರ ಮೇಲೆ FIR ದಾಖಲಾಗಿದೆ.

ಕರವೇ ಉಪಾಧ್ಯಕ್ಷ ಕಾರ್ತಿಕ್ ದೂರಿನ ಆಧಾರದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆದರೆ ನಾನು ಆ ರೀತಿ ಪೋಸ್ಟ್ ಮಾಡಿಲ್ಲ ಎಂದು ಮಹೇಶ್ ವಿಕ್ರಮ್ ಹೆಗ್ಡೆ ಫೇಸ್​ಬುಕ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಪೊಲೀಸರು ಕೇಸ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ಪರಪ್ಪನ ಅಗ್ರಹಾರದಿಂದ ನಟಿ ರನ್ಯಾ ರಾವ್ ರಿಲೀಸ್!

Btv Kannada
Author: Btv Kannada

Leave a Comment

Read More

Read More