ಹುಬ್ಬಳ್ಳಿ : ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನದಲ್ಲಿ ಮತ್ತೆ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿದ್ದು, 2 ಗಂಟೆಗೂ ಹೆಚ್ಚು ಕಾಲ ವಿಮಾನ ಆಕಾಶದಲ್ಲೇ ಹಾರಾಡಿದೆ.
ಮೊನ್ನೆಯಷ್ಟೇ ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ91 ವಿಮಾನವು ಹವಾಮಾನ ವೈಪರಿತ್ಯದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೇ ಮೂರು ಗಂಟೆಗೂ ಹೆಚ್ಚು ಕಾಲ ಹಾರಾಡಿತ್ತು. ಇದೀಗ ಬೆಂಗಳೂರಿನಿಂದ ಬಂದ ವಿಮಾನದಲ್ಲೂ ಅದೇ ರೀತಿಯ ಸಮಸ್ಯೆ ಕಾಣಿಡಿಕೊಂಡಿದೆ.
IC3412 ಸಂಖ್ಯೆಯ ವಿಮಾನವು ನಿನ್ನೆ (ಮಂಗಳವಾರ) ಸಂಜೆ 6 ಗಂಟೆಗೆ ಬೆಂಗಳೂರಿನಿಂದ (Bengaluru) ಹೊರಟಿತ್ತು. 6:50 ರ ವೇಳೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ವಿಮಾನ ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿ ತಲುಪಿದ್ರೂ, ಲ್ಯಾಂಡಿಂಗ್ ವೇಳೆ ಸಮಸ್ಯೆ ಉಂಟಾಗಿದೆ. ಇದರಿಂದ ಪ್ರಯಾಣಿಕರನ್ನ ಹೊತ್ತ ವಿಮಾನ ಸುಮಾರು 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ರಾತ್ರಿ 9:15 ಗಂಟೆಗೆ ವಿಮಾನ ಲ್ಯಾಂಡ್ ಆಗಿದೆ.
ಇದನ್ನೂ ಓದಿ : ಸರ್ಕಾರಿ ಸಭೆಯಲ್ಲಿ ಸಚಿವ ತಂಗಡಗಿ ಪುತ್ರನ ‘ದರ್ಬಾರ್’ – ಅಧಿಕಾರಿಗಳಿಗೆ ಸಿಗದ ಮರ್ಯಾದೆ.. ಸಾರ್ವಜನಿಕರ ಆಕ್ರೋಶ!








