ಹಂದಿ ಹೊಟ್ಟೆಯಲ್ಲಿ ಆನೆ ಮರಿ ಜನನ – ಇದೇನಿದು ವಿಚಿತ್ರ?

ಪ್ರಕೃತಿಯ ಮಡಿಲಲ್ಲಿ ಅದೆಷ್ಟು ನಿಗೂಢತೆಗಳಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ವಿಜ್ಞಾನವೇ ಬೆರಗಾಗುವಂತಹ, ಮನುಷ್ಯನ ಊಹೆಗೂ ನಿಲುಕದ ಘಟನೆಯೊಂದು ಇದೀಗ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಹಂದಿಯೊಂದು ಆನೆಯ ರೂಪವಿರುವ ಮರಿಗೆ ಜನ್ಮ ನೀಡಿದ್ದು, ಈ ವಿಚಿತ್ರ ಘಟನೆ ಸ್ಥಳೀಯರ ಹುಬ್ಬೇರಿಸಿದೆ.

ಹೌದು.. ಹಂದಿಯೊಂದು ಏಳು ಮರಿಗಳಿಗೆ ಜನ್ಮ ನೀಡಿದ್ದು, ಅವುಗಳಲ್ಲಿ ಒಂದು ಆನೆಯಂತಿದೆ. ಈ ವಿಸ್ಮಯಕಾರಿ ಘಟನೆ ಇದೀಗ ಸ್ಥಳೀಯರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ವಿಚಿತ್ರ ಜೀವಿಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

ಜಿಲ್ಲೆಯ ಪೆದ್ದಕೋತಪಲ್ಲಿ ಮಂಡಲದ ಕರ್ಪಮುಳ ಗ್ರಾಮದ ನಿವಾಸಿಯಾಗಿರುವ ಕುರಕುಲ ವೆಂಕಟಯ್ಯ ಎಂಬುವರು ಹಂದಿಗಳನ್ನು ಸಾಕುವುದರ ಮೂಲಕ ತಮ್ಮ ಜೀವನ ಸಾಗಿಸುತ್ತಾರೆ. ತಮ್ಮ ಮನೆಯ ಆವರಣದಲ್ಲಿ ಒಂದು ಸಣ್ಣ ಶೆಡ್‌ನಲ್ಲಿ ಹಂದಿಗಳನ್ನು ಸಾಕುತ್ತಾರೆ. ಹೀಗಿರುವಾಗ, ಏ.18 ರಂದು ಹಂದಿಯೊಂದು ತನ್ನ ಚೊಚ್ಚಲ ಹೆರಿಗೆಯಲ್ಲಿ ಏಳು ಹಂದಿಮರಿಗಳಿಗೆ ಜನ್ಮ ನೀಡಿತು. ಹಂದಿಮರಿಗಳು ಜನಿಸುವುದು ಸಾಮಾನ್ಯವಾದರೂ, ಅವುಗಳಲ್ಲಿ ಒಂದನ್ನು ನೋಡಿ ವೆಂಕಟಯ್ಯ ದಂಗಾದರು.

ಯಾಕೆಂದರೆ, ಒಂದು ಹಂದಿಮರಿಯ ಆಕಾರ ಆನೆ ಮರಿಯಂತೆ ಇತ್ತು. ಆನೆಯಂತೆಯೇ ಉದ್ದವಾದ ಸೊಂಡಿಲು ಮತ್ತು ದೊಡ್ಡ ಕಿವಿಗಳಿದ್ದವು. ಇದನ್ನು ನೋಡಿ ವೆಂಕಟಯ್ಯ ಇದೇನಿದು ವಿಚಿತ್ರ ಅಂತ ತಮ್ಮ ಹುಬ್ಬೇರಿಸಿದರು. ದುರದೃಷ್ಟವಶಾತ್, ವಿಚಿತ್ರ ಹಂದಿಮರಿಯು ಇನ್ನೊಂದು ಮರಿ ಜನಿಸಿದ ಸ್ವಲ್ಪ ಸಮಯದ ಬೆನ್ನಲ್ಲೇ ಮೃತಪಟ್ಟಿತು. ಸದ್ಯ ಈ ವಿಚಿತ್ರ ಹಂದಿಮರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ : ಜನರ ಸೇವೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ – ವಿನಯ್ ಕುಲಕರ್ಣಿ ಪುತ್ರಿಯರ ಭಾವುಕ ಪೋಸ್ಟ್!

Btv Kannada
Author: Btv Kannada

Leave a Comment

Read More