ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು IPL 2026 ಪಂದ್ಯಾವಳಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ RCB ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.
ಡೆಲ್ಲಿ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್, ಕರುಣ್ ನಾಯರ್ ಇರುವುದರಿಂದ ಇದು “ಕನ್ನಡಿಗರು vs ಕರ್ನಾಟಕ” ಕದನವಾಗಲಿದೆ. ಪರಿಸರ ಜಾಗೃತಿಗಾಗಿ RCB 2011ರಿಂದ ಗ್ರೀನ್ ಜೆರ್ಸಿ ಅಭಿಯಾನ ನಡೆಸುತ್ತಿದೆ.
ಗ್ರೀನ್ ಜೆರ್ಸಿಯ ವಿಶೇಷತೆಯೇನು?
2011 ರ ಐಪಿಎಲ್ ಆವೃತ್ತಿಯಿಂದ ಆರ್‌ಸಿಬಿ ತಂಡ ಸೀಸನ್ನಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ತನ್ನ ಅಭಿಮಾನಿಗಳಲ್ಲಿ ಸ್ವಚ್ಛ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಸಿಬಿ ಈ ಹಸಿರು ಜೆರ್ಸಿಯನ್ನು ಧರಿಸಲಿದೆ. ಅದರಂತೆ ಈ ಬಾರಿಯೂ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಸಿರು ಜೆರ್ಸಿ ತೊಟ್ಟು ಆಡಲಿದೆ. ತಂಡದ ಹೊಸ ಜೆರ್ಸಿ ಸಾಕಷ್ಟು ಆಕರ್ಷಕವಾಗಿದೆ. ಈ ಜೆರ್ಸಿಯ ಟೀ ಶರ್ಟ್‌ನಲ್ಲಿ ಹಸಿರು ಮತ್ತು ನೀಲಿ ಬಣ್ಣಗಳನ್ನು ಬಳಸಲಾಗಿದೆ.
ಗ್ರೀನ್ ಜೆರ್ಸಿಯಲ್ಲಿ ದಾಖಲೆ :
ಆರ್‌ಸಿಬಿ ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಹಸಿರು ಜೆರ್ಸಿ ಧರಿಸಿ ಒಂದು ಪಂದ್ಯವನ್ನು ಆಡುತ್ತದೆ. ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಈ ಜೆರ್ಸಿಯನ್ನು ಆರ್‌ಸಿಬಿ ಮಧ್ಯಾಹ್ನದ ಪಂದ್ಯಗಳಲ್ಲಿ ಧರಿಸಿ ಆಡುತ್ತದೆ. ಇನ್ನು ಹಸಿರು ಜೆರ್ಸಿಯಲ್ಲಿ ಆರ್‌ಸಿಬಿಯ ರಿಪೋರ್ಟ್ ಕಾರ್ಡ್ ನೋಡುವುದಾದರೆ.. ಆರ್‌ಸಿಬಿ ಇದುವರೆಗೆ ಹಸಿರು ಜೆರ್ಸಿ ತೊಟ್ಟು 15 ಪಂದ್ಯಗಳನ್ನಾಡಿದೆ. ಇದರಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ 9 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಇನ್ನು ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ವಿರುದ್ಧ ಗ್ರೀನ್ ಜೆರ್ಸಿ ತೊಟ್ಟು ಆಡಿದ್ದ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ಆರಂಭಿಕರಾದ ಫಿಲ್ ಸಾಲ್ಟ್ (65) ಹಾಗೂ ವಿರಾಟ್ ಕೊಹ್ಲಿ (62) ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಹೀಗಾಗಿ ಈ ಬಾರಿಯೂ ಅದೇ ಪ್ರದರ್ಶನವನ್ನು ಮುಂದುವರೆಸಲು ಆರ್‌ಸಿಬಿ ಪ್ರಯತ್ನಿಸಲಿದೆ.
ಇದನ್ನೂ ಓದಿ : ಆ ನಿರ್ದೇಶಕ ನನ್ನ ಕಾಮದ ದೃಷ್ಟಿಯಿಂದ ಮುಟ್ಟಿದರು – ಕರಾಳ ಅನುಭವ ಬಿಚ್ಚಿಟ್ಟ ನಟಿ ಡೈಸಿ ಶಾ!









