‘ಟಾಕ್ಸಿಕ್’ ಗ್ಯಾಂಗ್​​ಸ್ಟರ್ ಸಿನಿಮಾ ಅಲ್ಲ – ರಾಕಿಂಗ್ ಸ್ಟಾರ್ ಯಶ್!

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಮಾರ್ಚ್ 19ರಂದೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಯುದ್ಧ ಭೀತಿಯ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಜೂನ್ 04 ರಂದು ಅದ್ಧೂರಿಯಾಗಿ ‘ಟಾಕ್ಸಿಕ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಇತ್ತೀಚೆಗೆ ಲಾಸ್ ವೇಗಸ್‌ನ ಪ್ರಸಿದ್ಧ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ‘ಫ್ಯಾಂಡಾಂಗೋ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಯಶ್ ಅವರು ವರದಿಗಾರ್ತಿ ನಿಕ್ಕಿ ನೋವಾಕ್ ಅವರೊಂದಿಗೆ ಮಾತನಾಡುತ್ತಾ ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಚಿತ್ರಗಳ ಬಗ್ಗೆ ಯಶ್ ಮನಬಿಚ್ಚಿ ಮಾತನಾಡಿದ್ದಾರೆ.‘ಟಾಕ್ಸಿಕ್’ ಬಹಳ ಮಹಾತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಆ ಸಿನಿಮಾವನ್ನು ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್​​ನಲ್ಲೂ ಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ.

‘ಸಿನಿಮಾದ ವಸ್ತು ವಿಷಯದ ಬಗ್ಗೆ ಹೇಳುವುದಾದರೆ ಹಲವು ಪದರಗಳನ್ನು ಒಳಗೊಂಡ ಸೂಕ್ಷ್ಮವಾದ ಕತೆಯನ್ನು ‘ಟಾಕ್ಸಿಕ್’ ಹೊಂದಿದೆ. ಮೇಲ್ನೋಟಕ್ಕೆ ಗ್ಯಾಂಗ್​​ಸ್ಟರ್ ಎನಿಸಬಹುದಾದರೂ ಆಳದಲ್ಲಿ ಅದು ಬೇರೆಯದ್ದೇ ಅಂಶವನ್ನು ಒಳಗೊಂಡಿದೆ. ಮೇಲ್ನೋಟಕ್ಕೆ ಹಿಂಸಾತ್ಮಕ, ಆಕ್ಷನ್ ಸಿನಿಮಾ ಎನಿಸಿದರೂ ಸಹ ಅದು ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಹ ಆಗಿದೆ. ಜೊತೆಗೆ ಮಾನವೀಯ ಅಂಶಗಳನ್ನು ಸಾರುವ ಕತೆಯನ್ನು ಸಿನಿಮಾ ಒಳಗೊಂಡಿದೆ’ ಎಂದಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುವ ಸಿನಿಮಾ. ಕೆಲವು ಅದ್ಭುತವಾದ ತಂತ್ರಜ್ಞರು ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ನನ್ನ ನಿರ್ದೇಶಕಿ ಗೀತು ಮೋಹನ್​​ದಾಸ್, ಗ್ಯಾಂಗ್​​ಸ್ಟರ್ ಸಿನಿಮಾವನ್ನು ಸಂಪೂರ್ಣ ಭಿನ್ನ ದೃಷ್ಟಿಕೋನದಿಂದ ಕಟ್ಟಿಕೊಟ್ಟಿದ್ದಾರೆ. ನಾನಂತೂ ಆ ಸಿನಿಮಾನಲ್ಲಿ ನಟಿಸುವುದನ್ನು ಎಂಜಾಯ್ ಮಾಡಿದ್ದೇನೆ. ಸಿನಿಮಾ ಕಣ್ಣಿಗೆ ಹಬ್ಬವೇ ಆಗಲಿದೆ. ಜೊತೆಗೆ ಸಿನಿಮಾ ನೋಡುವ ಪ್ರೇಕ್ಷಕರ ಮನಸ್ಸಿನ ಮೇಲೂ ಸಹ ಗಾಢ ಪರಿಣಾಮವನ್ನು ಆ ಸಿನಿಮಾ ಬೀರಲಿದೆ’ ಎಂದು ಯಶ್ ಹೇಳಿದರು.

ಇದನ್ನೂ ಓದಿ : http://ಕರ್ನಾಟಕ ತಂತ್ರಜ್ಞಾನ, ತತ್ವಜ್ಞಾನದ ಸಂಗಮ – ರಾಜ್ಯದ ಸಂಸ್ಕೃತಿ, ಮಠದ ಸೇವೆಗೆ ಮೋದಿ ಮೆಚ್ಚುಗೆ!

Btv Kannada
Author: Btv Kannada

Leave a Comment

Read More

Read More