ಹಾವೇರಿ : ಹರಿಹರ ಪಂಚಮಸಾಲಿ ಪೀಠದ ವಿವಾದವೀಗ ತಾರಕಕ್ಕೇರಿದ್ದು, ವಚನಾನಂದ ಸ್ವಾಮೀಜಿ ಅವರ ಉಚ್ಚಾಟನೆ ವಿಚಾರವಾಗಿ ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಪಿ.ಡಿ. ಶಿರೂರು ಅವರು ಹಾವೇರಿಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಚನಾನಂದ ಸ್ವಾಮೀಜಿ ಮಠವನ್ನು ಬಿಟ್ಟು ಹೋದರೆ ಒಳ್ಳೆಯದು, ಕಾನೂನಿನ ಮೂಲಕ ಹೊರ ಹಾಕಬೇಕಾಗುತ್ತೆ. ನಾವು ದೌರ್ಜನ್ಯ ಮಾಡಿ ಹೊರಗೆ ಹಾಕೋದು ಬೇಡಾ ಅಂತಾ ಇದ್ದೇವೆ, ಕಾನೂನಿನ ಕ್ರಮಕ್ಕೆ ನಾವೆಲ್ಲರೂ ಕಾಯ್ತು ಇದ್ದೇವೆ ಎಂದು ಪಿ.ಡಿ. ಶಿರೂರು ಹೇಳಿದ್ದಾರೆ.
ಉಚ್ಚಾಟನೆಯನ್ನು ಬಹುಮತದಿಂದ ಅಷ್ಟೇ ಅಲ್ಲ, ಎಲ್ಲರೂ ಒಟ್ಟಾಗಿ ಮಾಡಿದ್ದೇವೆ. ನಾವು 12 ಜನರು, ಎಲ್ಲರೂ ಸಹಿ ಮಾಡಿ ಅವರನ್ನು ಉಚ್ಚಾಟನೆ ಮಾಡಿದ್ದೇವೆ. ಆ ಪ್ರತಿಯನ್ನು ತಹಶೀಲ್ದಾರ್ ಅವರಿಗೆ ನೀಡಿದ್ದೇವೆ, ಅಂದು ತಹಶೀಲ್ದಾರ್ ಅವರು ಡಿಸಿ ಅವರಿಗೆ ವಿಷಯ ತಿಳಿಸುತ್ತೇವೆ. ಪೊಲೀಸರಿಗೆ ಈ ವಿಚಾರ ತಿಳಿಸಿದಾಗ ನಿಮಗೆ ಭದ್ರತೆ ಕೊಡಲು ನಮಗೆ ಕಳಿಸಿದ್ದಾರೆ ಎಂದಿದ್ದಾರೆ.
ಈ ವಿಚಾರವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ, ಉಚ್ಚಾಟನೆ ಒಂದು ಸಾರಿ ಮಾಡಿದ ಮೇಲೆ ಮತ್ತೆ ಅವರನ್ನು ಮರಳಿ ತೆಗದುಕೊಳ್ಳುವ ಮಾತೇ ಇಲ್ಲ. ಕಾನೂನು ಪ್ರಕಾರ ಅವರನ್ನು ಹೊರಗೆ ಕಳಿಸಲು ನಾವು ಕಾಯ್ತ ಇದ್ದೇವೆ. ಉಚ್ಚಾಟನೆ ಮಾಡಿದ್ದನ್ನು ಸಮಾಜದ 70% ಜನ ಒಳ್ಳೆಯದು ಮಾಡಿದ್ದೀರಿ ಎನ್ನುತ್ತಿದ್ದಾರೆ ಎಂದು ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಪಿ.ಡಿ. ಶಿರೂರು ಹೇಳಿದರು.
ಇದನ್ನೂ ಓದಿ : ‘ಟಾಕ್ಸಿಕ್’ ಗ್ಯಾಂಗ್ಸ್ಟರ್ ಸಿನಿಮಾ ಅಲ್ಲ – ರಾಕಿಂಗ್ ಸ್ಟಾರ್ ಯಶ್!









