ಇನ್‌ಸ್ಟಾದಲ್ಲಿ ಸಬ್‌ಸ್ಕ್ರಿಪ್ಶನ್ ಟ್ರೆಂಡ್ ಶುರು – ಇನ್ಮುಂದೆ ಸೋನು ಗೌಡ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡೋಕೆ ಹಣ ಕೊಡ್ಬೇಕು!

ಬೆಂಗಳೂರು : ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಗುರುತಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಮೂಲಕವೇ ಫೇಮಸ್ ಆಗಿರುವ ಸೋನು ಶ್ರೀನಿವಾಸ್ ಗೌಡ ಆಗಾಗ ಟ್ರೋಲ್ ಆಗ್ತಿರ್ತಾರೆ. ಕಳೆದ ಕೆಲವು ದಿನಗಳಿಂದ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಲೈಫ್ ಸ್ಟೋರಿ, ಲವ್‌ & ಬ್ರೇಕಪ್ ಕಹಾನಿಯನ್ನ ಎಳೆ ಎಳೆಯಾಗಿ ಸೋನು ಶ್ರೀನಿವಾಸ್ ಗೌಡ ತೆರೆದಿಡುತ್ತಿದ್ದಾರೆ. ಮೊದಲ ಲವ್ ಸ್ಟೋರಿ ಶುರುವಾಗಿದ್ದು ಹೇಗೆ, ಬ್ರೇಕಪ್ ಆಗಿದ್ದು ಹೇಗೆ ಎಂಬುದನ್ನ ಬಿಚ್ಚಿಟ್ಟಿದ್ದಾರೆ.

ಇದೀಗ ಸೋನು ಗೌಡ ಮತ್ತೊಂದು ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಅದೇನೆಂದರೆ ಇನ್ಮಾಗ್ರಾಮ್ ಸಬ್‌ಸ್ಕ್ರಿಪ್ಪನ್ ಅಂತ. ಈ ಮೂಲಕ ಅದೆಷ್ಟೋ ನಟಿಯರು. ಸೋಷಿಯಲ್ ಮೀಡಿಯಾ ಇನ್ಫ್ಲ್ಯೂನ್ಸೆರ್ಸ್ ತಮ್ಮ ಎಕ್ಸ್‌ಕ್ಲೋಸಿವ್ ಕಂಟೆಂಟ್‌ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದ್ರೆ ಇಲ್ಲೊಂದು ಮುಖ್ಯವಾದ ವಿಚಾರ ಏನೆಂದರೆ ಆ ಎಕ್ಸ್‌ಕ್ಯೂಸಿವ್ ಕಂಟೆಂಟ್ ನೋಡಬೇಕಿದ್ರೆ ತಿಂಗಳಿಗೆ ಹಣವನ್ನು ಕಟ್ಟಿ ಸಬ್‌ಸ್ಟೈಬ್ ತೆಗೆದುಕೊಳ್ಳಬೇಕಾಗುತ್ತದೆ.

ಈ ಟ್ರೆಂಡ್ ಶುರುವಾಗಿ ಸುಮಾರು ದಿನಗಳೇ ಕಳೆದಿದೆ. ಆ್ಯಂಕರ್ ವಿಷ್ಣು ಪ್ರಿಯಾ, ಬಾಲಿವುಡ್ ನಟಿ ನೇಹಾ ಶರ್ಮಾ, ಕೇರಳ ಮೂಲದ ಡಿಜಿಟಲ್ ಕ್ರಿಯೇಟರ್ ಅಶ್ವನಿ ಎ. ಸೇರಿದಂತೆ ಅನೇಕರು ಈ ಸಬ್‌ಸ್ಕ್ರಿಪ್ಪನ್ ಟ್ರೆಂಡ್ ಅನ್ನು ಶುರುಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕವೇ ತಿಂಗಳಿಗೆ ಲಕ್ಷ, ಲಕ್ಷ ಹಣ ಸಂಪಾದನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದೀಗ ಕನ್ನಡಲ್ಲಿಯೂ ಈ ಟ್ರೆಂಡ್ ಶುರುವಾಗಿದ್ದು, ಸೋನು ಶ್ರೀನಿವಾಸ್ ಗೌಡ ಕೂಡಾ ಇನ್ಮಾಗ್ರಾಮ್ ಸಬ್‌ಸ್ಕ್ರಿಪ್ಪನ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ 132 ಮಂದಿ ಸಬ್‌ಸ್ಕ್ರಿಪ್ಷನ್ ಪಡೆದಿದ್ದಾರೆ. ಹಾಗೆಯೇ ಪ್ರತೀ ತಿಂಗಳಿಗೆ 390 ರೂ. ಪೇ ಮಾಡಿ ಸೋನು ಶ್ರೀನಿವಾಸ್ ಗೌಡ ಇನ್‌ಸ್ಟಾಗ್ರಾಮ್ ಖಾತೆ ಸಬ್‌ಸ್ಕ್ರಿಪ್ಪನ್ ಪಡೆಯಬಹುದಾಗಿದೆ.

ಇದನ್ನೂ ಓದಿ : ನನ್ನ ಭವಿಷ್ಯ ಮುಗಿದಿದೆ ಬಿಡಿ, ರಾಜ್ಯದ ಭವಿಷ್ಯಕ್ಕಾಗಿ ಕಾರ್ಯಕರ್ತರು ದುಡಿಮೆ ಮಾಡಿ – HD ಕುಮಾರಸ್ವಾಮಿ!

Btv Kannada
Author: Btv Kannada

Leave a Comment

Read More

Read More