ಮಂಡ್ಯ : ಆದಿಚುಂಚನಗಿರಿ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕರ್ನಾಟಕ ತಂತ್ರಜ್ಞಾನ, ತತ್ವಜ್ಞಾನ ಎರಡನ್ನು ಸಮೃದ್ಧಿ ಹೊಂದಿದೆ. ಇಂದು ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನ ದರ್ಶನ ಪಡೆದಿದ್ದು ನನ್ನ ಪುಣ್ಯ, ನನ್ನ ಸೌಭಾಗ್ಯ. ಈ ಅನುಭವವನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಕ್ಕರೆ ನಾಡು ಮಂಡ್ಯ ನಾಡು. ಕಬ್ಬಿನಂತೆ ಮಂಡ್ಯದ ಜನರ ಮಾತು ಸಿಹಿ ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ.
ಇದೇ ವೇಳೆ ‘ಸೌಂದರ್ಯ ಲಹರಿ’ ಪುಸ್ತಕವನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಿದರು. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ನವಿಲಿನ ಆಕೃತಿಯನ್ನು ಪ್ರಧಾನಿ ಅವರಿಗೆ ನೀಡಿದರು. ಬಳಿಕ ವೇದಿಕೆ ಮೇಲೆ ಪ್ರಧಾನಿ ‘ನಮೋ’ ಕನ್ನಡದಲ್ಲಿ ಭಾಷಣ ಆರಂಭಿಸಿದರು.
ಸಮಾಜಕ್ಕೆ ಆದಿಚುಂಚನಗಿರಿ ಮಠ ಸೇವೆ ಅಪಾರ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬಾಲಗಂಗಾಧರನಾಥ ಶ್ರೀಗಳ ಪರಂಪರೆಯು ಅಮೋಘವಾದದ್ದು. ಈ ಮಠದ ನೈತಿಕ ಮೌಲ್ಯಗಳಿಂದ ದಾರಿ ದೀಪವಾಗಿದೆ. ಆದಿಚುಂಚನಗಿರಿ ಮಠಕ್ಕೆ 1800 ವರ್ಷಗಳ ಇತಹಾಸವಿದೆ ಎಂದು ಮಠದ ಇತಿಹಾಸ, ಸೇವೆಯನ್ನು ಪ್ರಧಾನಿ ಸ್ಮರಿಸಿದರು.
ಶ್ರೀಮಠವು ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಮಠ ಸೇವೆ, ಕಾರ್ಯ ಸದಾ ಜೀವಂತ. ಸಾಮಾನ್ಯ ಜನರ ಜೀವನ ಬಗ್ಗೆ ಬಾಲಗಂಗಾಧರನಾಥ ಶ್ರೀಗಳಿಗೆ ಅರಿವಿತ್ತು. ಅವರು ದಿವ್ಯ ಶಕ್ತಿ ಹೊಂದಿದ್ದರು. ಶ್ರೀಗಳು ಕರುಣೆಯ ಪ್ರತಿರೂಪವಾಗಿದ್ದಾರೆ ಎಂದು ಕೊಂಡಾಡಿದರು. ಇಂದು ಶ್ರೀ ಮಠವನ್ನು ಶ್ರೀ ನಿರ್ಮಲಾನಂದ ಶ್ರೀಗಳು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ದಿಗಂತ್ ನಟನೆಯ “ರುದ್ರ ಕಾಲ” ಟೈಟಲ್ ರಿಲೀಸ್ – ಸ್ಟಾರ್ ಹೀರೋಯಿನ್ ಸಮಂತ ಸಾಥ್!










