ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ಕುಮಾರ್ ಅವರು ಇಂದು ರಾಜೀನಾಮೆ ನೀಡಿದ್ದು, ನೂತನ ಸಿಎಂ ಆಗಿ ಬಿಜೆಪಿ ಅಭ್ಯರ್ಥಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ನಾಳೆ ಹೊಸ ಸಿಎಂ ಆಗಿ ಚೌಧರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ನಿತೀಶ್ ಕುಮಾರ್ 20 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದವರು. ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಜೆಡಿಯು ಬದಲಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.
ಳೆದ ಸರ್ಕಾರದ ಅವಧಿಯಲ್ಲೂ ಬಿಜೆಪಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಅದು ಬಿಜೆಪಿ ಮೈತ್ರಿಕೂಟದ ಸರ್ಕಾರವಾಗಿತ್ತು. ಆದರೆ, ಇದೀಗ ಬಿಜೆಪಿ ನಾಯಕನೇ ಸಿಎಂ ಆಗುತ್ತಿರುವುದರಿಂದ ಅಧಿಕೃತವಾಗಿ ಬಿಹಾರದಲ್ಲಿ ಬಿಜೆಪಿ ತನ್ನ ಖಾತೆ ತೆರೆದಂತಾಗಿದೆ.

ನಾಳೆ ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ನಂತರ ಮುಖ್ಯಮಂತ್ರಿಯಾದ ಬಿಹಾರದ ಎರಡನೇ ನಾಯಕ ಎಂಬ ಹೆಗ್ಗಳಿಕೆಯೂ ಇವರದ್ದು.
ಇದನ್ನೂ ಓದಿ : ತಹಶೀಲ್ದಾರ್ಗಳಿಗೆ ಪ್ರಮೋಷನ್ ಕೊಡಿ – KAS ಅಧಿಕಾರಿಗಳ ಸಂಘದಲ್ಲಿ ಭುಗಿಲೆದ್ದ ಅಸಮಾಧಾನ!









