ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿದ್ದು, ಈ ಮಧ್ಯೆ ಜೋಗಿ ಪ್ರೇಮ್ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ನಿಂದ ಕಂಟಕ ಎದುರಾಗಿದೆ. ‘ಜನನಾಯಕನ್’ ಸಿನಿಮಾಗೆ ಎದುರಾದ ಸಂಕಷ್ಟವೇ ಈಗ ‘ಕೆಡಿ’ ಚಿತ್ರಕ್ಕೂ ಎದುರಾಗಿದೆ ಎನ್ನಲಾಗುತ್ತಿದೆ.

ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕೆಡಿ’ ಇದೇ ತಿಂಗಳ 30ರಂದು ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ‘ಕೆಡಿ’ಗೆ ಸೆನ್ಸಾರ್ ಪ್ರಕ್ರಿಯೆ ನಡೆಯಬೇಕಿದೆ. ಈ ಹಂತದಲ್ಲಿ ಮತ್ತೆ ಸೆನ್ಸಾರ್ ಮಂಡಳಿಯಿಂದ ಕಂಟಕ ಎದುರಾಗಿದೆ.

ಕೇಂದ್ರ ಸೆನ್ಸಾರ್ ಬೋರ್ಡ್ನಿಂದ ನಿಮಯ ಉಲ್ಲಂಘನೆಯಾಗಿದ್ದು, ನಿರ್ದೇಶಕ, ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್ ರಿವೈಸಿಂಗ್ ಕಮಿಟಿ ಬರೆದಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗ್ಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ಎ ಸರ್ಫಿಟಿಕೇಟ್ ನೀಡುವುದಾಗಿ ಹೇಳಿದ್ದು, ಹಾಡಿನ ಸಾಹಿತ್ಯ ಎರಡು ಸಾಲು ಬದಲಿಸಲು ಸೂಚನೆ ನೀಡಿತ್ತು.
ಆದ್ರೆ, ಇದನ್ನು ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಪಾಸ್ ಮಾಡದೆ ಮತ್ತೆ ರಿವೈಸಿಂಗ್ ಕಮಿಟಿಗೆ ವರ್ಗಾವಣೆ ಮಾಡಿದೆ. ಈ ಮೂಲಕ ಕನ್ನಡ ಸಿನಿಮಾಗಳಿಗೆ ಮೇಲೆ ಕೇಂದ್ರ ಸೆನ್ಸಾರ್ ಬೋರ್ಡ್ನಿಂದ ಅನ್ಯಾಯ ಆಗಿದೆ.
ಇದನ್ನೂ ಓದಿ : http://ಏ.15ಕ್ಕೆ ಆದಿಚುಂಚನಗಿರಿಯಲ್ಲಿ ಶ್ರೀ ಭೈರವೈಕ್ಯ ಮಂದಿರ ಲೋಕಾರ್ಪಣೆ – ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ!









