ಬಿಗ್​ಬಾಸ್ ಸೋನು ಸಬ್ ಇನ್ಸ್​​ಪೆಕ್ಟರ್ ಆಗಿ ಬಿಟ್ರಾ? ಟ್ರೋಲ್ ಮಾಡುವವರೇ ಬಿ ಕೇರ್ ಫುಲ್.. ಸೋನು ಕೇಸ್ ಹಾಕಿ ಬಿಡ್ತಾರೆ!

ಬಿಗ್​ಬಾಸ್ ಓಟಿಟಿ ಸೀಸನ್ 1ರ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಬಿಗ್​ಬಾಸ್ ಮನೆಗೆ​ ಹೋಗಿದ್ದಾಗಲೂ ಸೋನು ಗೌಡ ಸಖತ್​ ಸುದ್ದಿಯಲ್ಲಿದ್ದರು. ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಅಂತ ಹೇಳಿ ಶಾಕ್​ ಕೊಟ್ಟಿದ್ದರು.

ಇದೀಗ ಮೊಟ್ಟ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿಯ ಗೆಟಪ್​ನಲ್ಲಿ ಸೋನು ಗೌಡ ಕಾಣಿಸಿಕೊಂಡಿದ್ದಾರೆ. ಸೋನು ಗೌಡ ಡಬಲ್ ಸ್ಟಾರ್ ಖಾಕಿ ಯುನಿಫಾರ್ಮ್ ಧರಿಸಿಕೊಂಡ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ ಸೋನು ಗೌಡ ಪೊಲೀಸ್ ಯುನಿಫಾರ್ಮ್ ಧರಿಸಿರೋದಕ್ಕೆ ಒಂದು ಕಾರಣವಿದೆ. ಅದು ಏನಂದ್ರೆ ಸೋನು ಗೌಡ ವೆಬ್ ಸೀರಿಸ್ ಒಂದರಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ ಸೋನು ಗೌಡ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಹಾಗೇ ರೆಡಿಯಾಗಿದ್ದಾರೆ. ಇನ್ನೂ ಸೋನು ಗೌಡರನ್ನು ಪೊಲೀಸ್​ ಗೆಟಪ್​ನಲ್ಲಿ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಸೋನು ಗೌಡ ಗೆಟಪ್ ನೋಡಿದವ್ರು ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ. ಇನ್ಮೇಲೆ ಎಲ್ಲೂ ಕಳ್ಳತನ ಆಗೋದೇ ಇಲ್ಲ, ಇನ್ಮುಂದೆ ನಾನು ಕಳ್ಳತನ ಮಾಡೋದಿಲ್ಲ ತಮಾಷೆಯಾಗಿಯೇ ಹಲವರು ಕಾಮೆಂಟ್ ಹಾಕಿದ್ದಾರೆ. ಇನ್ನೋರ್ವ ನಾನು ಕಳ್ಳತನ ಮಾಡಿ ಅರೆಸ್ಟ್ ಆಗ್ತೀನೀ ಎಂದಿದ್ದಾನೆ. ‘ಒಟ್ಟಾರೆ, ಸೋನು ಶ್ರೀನಿವಾಸ ಗೌಡ ಸಖತ್ ಟ್ರೋಲ್ ಕಂಟೆಂಟ್‌ ಅನ್ನ ಶೇರ್ ಮಾಡಿದ್ದು, ಇದನ್ನ ಅದ್ಯಾವ ರೀತಿ ಟ್ರೋಲಿಗರು ಟ್ರೋಲ್ ಮಾಡ್ತಾರೋ ಏನೋ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ ಅಂತಲೇ ಹೇಳಬಹುದು.

Btv Kannada
Author: Btv Kannada

Leave a Comment

Read More

Read More