ಇಂದಿನಿಂದ ಚಾಂಪಿಯನ್ಸ್​ ಟ್ರೋಫಿ ಆರಂಭ.. ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ ಯಾವಾಗ? ಇಲ್ಲಿದೆ ಮಾಹಿತಿ!

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಇಂದಿನಿಂದ ಪ್ರಾರಂಭವಾಗಲಿದೆ. ಪಾಕಿಸ್ತಾನ ಮತ್ತು ದುಬೈನಲ್ಲಿ 19 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ಬಲಿಷ್ಠ ತಂಡಗಳು ಭಾಗಿಯಾಗುತ್ತಿವೆ. ಇಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡ ಮುಖಾಮುಖಿ ಆಗುತ್ತಿವೆ.

ಪಾಕಿಸ್ತಾನ ಆಯೋಜಿಸುತ್ತಿರುವ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದ್ದು, ಪ್ರತಿ ಬಾರಿಯಂತೆ ಈ ಸಲವೂ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇನ್ನು ಭದ್ರತೆ, ಗಡಿ, ಭಯೋತ್ಪಾದಕತೆ ಸೇರಿದಂತೆ ಹಲವು ಕಾರಣಗಳಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುತ್ತಿಲ್ಲ. ಹೀಗಾಗಿ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಂಡಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಗುರುವಾರ (ಮಾ.23) ಬಾಂಗ್ಲಾದೇಶದ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಹಾಗೆಯೇ ಫೆ.23ರಂದು ದುಬೈನಲ್ಲಿ ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ :

ಫೆಬ್ರವರಿ 19, ಪಾಕಿಸ್ತಾನ v ನ್ಯೂಜಿಲೆಂಡ್, ಕರಾಚಿ, ಪಾಕಿಸ್ತಾನ
ಫೆಬ್ರವರಿ 20, ಬಾಂಗ್ಲಾದೇಶ v ಭಾರತ, ದುಬೈ
ಫೆಬ್ರವರಿ 21, ಅಫ್ಘಾನಿಸ್ತಾನ v ದಕ್ಷಿಣ ಆಫ್ರಿಕಾ, ಕರಾಚಿ, ಪಾಕಿಸ್ತಾನ
ಫೆಬ್ರವರಿ 22, ಆಸ್ಟ್ರೇಲಿಯಾ v ಇಂಗ್ಲೆಂಡ್, ಲಾಹೋರ್, ಪಾಕಿಸ್ತಾನ
ಫೆಬ್ರವರಿ 23, ಪಾಕಿಸ್ತಾನ v ಭಾರತ, ದುಬೈ
ಫೆಬ್ರವರಿ 24, ಬಾಂಗ್ಲಾದೇಶ v ನ್ಯೂಜಿಲೆಂಡ್, ರಾವಲ್ಪಿಂಡಿ, ಪಾಕಿಸ್ತಾನ
ಫೆಬ್ರವರಿ 25, ಆಸ್ಟ್ರೇಲಿಯಾ v ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ, ಪಾಕಿಸ್ತಾನ
ಫೆಬ್ರವರಿ 26, ಅಫ್ಘಾನಿಸ್ತಾನ v ಇಂಗ್ಲೆಂಡ್, ಲಾಹೋರ್, ಪಾಕಿಸ್ತಾನ
ಫೆಬ್ರವರಿ 27, ಪಾಕಿಸ್ತಾನ v ಬಾಂಗ್ಲಾದೇಶ, ರಾವಲ್ಪಿಂಡಿ, ಪಾಕಿಸ್ತಾನ
ಫೆಬ್ರವರಿ 28, ಅಫ್ಘಾನಿಸ್ತಾನ v ಆಸ್ಟ್ರೇಲಿಯಾ, ಲಾಹೋರ್, ಪಾಕಿಸ್ತಾನ
ಮಾರ್ಚ್ 1, ದಕ್ಷಿಣ ಆಫ್ರಿಕಾ v ಇಂಗ್ಲೆಂಡ್, ಕರಾಚಿ, ಪಾಕಿಸ್ತಾನ
ಮಾರ್ಚ್ 2, ನ್ಯೂಜಿಲೆಂಡ್ v ಭಾರತ, ದುಬೈ
ಮಾರ್ಚ್ 4, ಸೆಮಿಫೈನಲ್ 1, ದುಬೈ
ಮಾರ್ಚ್ 5, ಸೆಮಿಫೈನಲ್ 2, ಲಾಹೋರ್, ಪಾಕಿಸ್ತಾನ
ಮಾರ್ಚ್ 9, ಫೈನಲ್, ಲಾಹೋರ್ (ಭಾರತ ಫೈನಲ್‌ ಪ್ರವೇಶಿಸಿದರೆ ಈ ಪಂದ್ಯವನ್ನು ದುಬೈನಲ್ಲಿ ಆಡಲಾಗುತ್ತದೆ)
ಮಾರ್ಚ್ 10, ಮೀಸಲು ದಿನ

ಪಂದ್ಯ ಎಷ್ಟು ಗಂಟೆಗೆ? ನೇರಪ್ರಸಾರ ವೀಕ್ಷಿಸುವುದೇಗೆ? ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜಿಯೋ ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯಲ್ಲಿ ಕೂಡ ಪಂದ್ಯಗಳನ್ನು ವೀಕ್ಷಿಸಬಹುದು. ಇನ್ನು ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30 ಗಂಟೆಗೆ ಆರಂಭವಾಗಲಿವೆ.

ಈ ಬಾರಿಯ ಚಾಂಪಿಯನ್ ಟ್ರೋಫಿಯಲ್ಲಿ 2 ಪ್ರಮುಖ ತಂಡಗಳು ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ. 2004ರ ಚಾಂಪಿಯನ್ ವೆಸ್ಟ್ ಇಂಡೀಸ್ ಸತತ 2ನೇ ಬಾರಿಗೆ ಟೂರ್ನಿ ಅರ್ಹತೆ ತಪ್ಪಿಸಿಕೊಂಡಿದೆ. ಇನ್ನು 2002ರ ಜಂಟಿ ಚಾಂಪಿಯನ್ ಶ್ರೀಲಂಕಾ, 2023ರ ಏಕದಿನ ವಿಶ್ವಕಪ್‌ನಲ್ಲಿ ತೋರಿದ ಕಳಪೆ ನಿರ್ವಹಣೆಯಿಂದಾಗಿ ಟೂರ್ನಿಗೆ ಅರ್ಹತೆ ಪಡೆದಿಲ್ಲ.

Btv Kannada
Author: Btv Kannada

Leave a Comment

Read More