WPL : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​​ಸಿಬಿಗೆ 8 ವಿಕೆಟ್​​​ಗಳ ಭರ್ಜರಿ ಜಯ!

ವಡೋದರಾ : ನಿನ್ನೆ ವಡೋದರಾ ಇಂಟರ್​​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್​​ನ 4ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​​ಸಿಬಿ 8 ವಿಕೆಟ್​​​ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಆರ್​​ಸಿಬಿಗೆ 141 ರನ್ ಗಳಿಸಿ ಸಾಧಾರಣ ಗುರಿ ನೀಡಿತ್ತು. ಡೆಲ್ಲಿ ನೀಡಿದ 142 ರನ್​ಗಳ ಗುರಿ ಬೆನ್ನಟ್ಟಿದ ಆರ್​​ಸಿಬಿ ಇನ್ನೂ 3.4 ಬಾಲ್​​ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿದೆ. ಈ ಮೂಲಕ ಈ ಸೀಸನ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಆರ್​ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನಿಂಗ್​ ಮಾಡಿದ ಕ್ಯಾಪ್ಟನ್​ ಸ್ಮೃತಿ ಮಂದಾನ ಅಬ್ಬರಿಸಿದ್ದು, ಎದುರಿಸಿದ 47 ಬಾಲ್​ನಲ್ಲಿ ಭರ್ಜರಿ ಸಿಕ್ಸರ್​​, ಫೋರ್​ಗಳ​ ಸಮೇತ 81 ರನ್​ ಚಚ್ಚಿದರು.
ಸ್ಮೃತಿ ಮಂದಾನಗೆ ಸಾಥ್​ ನೀಡಿದ ಮತ್ತೋರ್ವ ಓಪನಿಂಗ್​​ ಬ್ಯಾಟರ್​ ಡೇನಿಯಲ್ ವೈಟ್ ಭರ್ಜರಿ ಪ್ರದರ್ಶನ ನೀಡಿ, 33 ಬಾಲ್​ನಲ್ಲಿ 42 ರನ್​ ಬಾರಿಸಿದರು. ಕ್ಯಾಪ್ಟನ್​ ಸ್ಮೃತಿ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​ 170ಕ್ಕೂ ಹೆಚ್ಚು ಇದ್ದರೆ, ಡೇನಿಯಲ್ ವೈಟ್ 125ಕ್ಕೂ ಹೆಚ್ಚೇ ಇತ್ತು. ಇನ್ನು ಕೊನೆಯ ಹಂತದಲ್ಲಿ ಎಲ್ಲಿಸ್ ಪೆರ್ರಿ 7 ರನ್​ ಮತ್ತು ರಿಚಾ ಘೋಷ್ 1 ಸಿಕ್ಸರ್​ ಮತ್ತು 1 ಫೋರ್​ನೊಂದಿಗೆ 11 ರನ್​ ಕಲೆ ಹಾಕಿ ಆರ್​​ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Btv Kannada
Author: Btv Kannada

Leave a Comment

Read More