ಮೊನಾಲಿಸಾಗೆ ವಜ್ರದ ಹಾರ.. ‘ಬಲಿ ಕಾ ಬಕ್ರಾ’ ಮಾಡ್ತಿದ್ದಾರೆ ಎಂದ ನೆಟ್ಟಿಗರು!

ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಜೇನು ಕಣ್ಣಿನ ಹುಡುಗಿ ಮೊನಾಲಿಸಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ, ಸಖತ್ ಫೇಮಸ್ ಆಗಿದ್ದಾಳೆ. ಸದ್ಯ ಈಕೆಗೆ ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳ ಆಫರ್ ಕೂಡ ಬಂದಿವೆ.

ಫಿಲ್ಮ್​ ಶೂಟಿಂಗ್​ ಅದೂ ಇದೂ ಅಂತೆಲ್ಲಾ ಎಲ್ಲೆಂದರಲ್ಲಿ ಮೊನಾಲಿಸಾಳನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಆದರೆ ಆ ವಿಡಿಯೋಗಳ ಪೈಕಿ ಕೆಲವು ವಿಡಿಯೋಗಳನ್ನು ನೋಡಿದ ನೆಟ್ಟಿಗರಿಂದ ಕೆಲವು ಅನುಮಾನಗಳ ಕಮೆಂಟ್ಸ್​ಗಳೂ ಹರಿದಾಡುತ್ತಿವೆ. 

ಇದೀಗ ಕೇರಳದ ಜ್ಯುವೆಲ್ಲರಿ ಶಾಪ್​ ಒಂದರ ಉದ್ಘಾಟನೆ ವೇಳೆ ಮೊನಾಲಿಸಾಳನ್ನು ಕರೆಸಿ ಕೋಟಿ ಕೋಟಿ ಬೆಲೆ ಬಾಳುವ ಹಾರಗಳನ್ನು ಹಾಕಲಾಗಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಜ್ಯುವೆಲ್ಲರ್ಸ್ ಶೋರೂಮ್ ಅನ್ನು ಈಕೆ ಉದ್ಘಾಟಿಸಿದ್ದಾಳೆ. ಈಕೆ ಬರುವುದು ತಿಳಿಯುತ್ತಿದ್ದಂತೆಯೇ ಭಾರಿ ಜನಸ್ತೋಮ ನೆರೆದಿತ್ತು. ಯಾವುದೇ ಉದ್ಯಮಿಗಳು ಹಾಲಿ ಚಾಲ್ತಿಯಲ್ಲಿ ಇರುವವರು ಉದ್ಘಾಟನೆಗೆ ಕರೆಸುವುದು ಹೊಸ ವಿಷಯವೇನಲ್ಲ. ಅದೇ ರೀತಿ ಮೊನಾಲಿಸಾಳಿಗೂ ಕರೆಸಲಾಗಿದೆ. ತಾನು ಯಾಕೆ ಬಂದಿದ್ದೇನೆ, ಏಕಾಏಕಿ ತನಗೆ ಏನಾಗುತ್ತಿದೆ ಎನ್ನುವ ಅರಿವು ಕೂಡ ಈಕೆಯಲ್ಲಿ ಇದ್ದಂತೆ ಕಾಣಿಸುತ್ತಿಲ್ಲ.

ತನ್ನ ಹೊಸ ಖ್ಯಾತಿಯಿಂದ ಮೊನಾಲಿಸಾ ಖುಷಿ ಪಡುತ್ತಿದ್ದಾರೆ. ಜ್ಯುವೆಲ್ಲರಿ ಮಾಲೀಕ ಬೋಚೆ ಜೊತೆ ಹೆಜ್ಜೆ ಹಾಕಿದ್ದಾಳೆ. ಬೋಚೆ ಮೊನಾಲಿಸಾಳ ಕುತ್ತಿಗೆಗೆ ವಜ್ರದ ಹಾರ ಹಾಕಿದ್ದರು. ಈ ಸಂದರ್ಭದಲ್ಲಿ ಕೂಡ ಮೊನಾಲಿಸಾ ಮುಖ ನೋಡಿದರೆ ಏನೋ ಅಸಹಜ ಎನ್ನಿಸುತ್ತಿದೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮೊನಾಲಿಸಾಳನ್ನು ಬಲೀ ಕಾ ಬಕರಾ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಹಾಕಿದ್ದಾರೆ.

ಯಾಕೆಂದರೆ ಜ್ಯುವೆಲ್ಲರಿ ಮಾಲೀಕ ಬೋಚೆ ಈಚೆಗಷ್ಟೇ ಅರೆಸ್ಟ್​ ಆಗಿದ್ದರು. ಮಲಯಾಳಂ ನಟಿ ಹನಿ ರೋಸ್ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕೇರಳ ಪೊಲೀಸರು ಅವರನ್ನು ಬಂಧಿಸಿದ್ದರು. ಲೈಂಗಿಕ ಕಿರುಕುಳ ಆರೋಪ ಅವರ ಮೇಲಿದೆ. ಅಷ್ಟಕ್ಕೂ ಇದೇ ರೀತಿ ಷೋ ರೂಮ್​ ಉದ್ಘಾಟನೆ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದರಿಂದ ಇವರ ವಿರುದ್ಧ ಕೇಸ್​ ದಾಖಲಾಗಿದೆ. ಈಗ ಈ ವಿಡಿಯೋದಲ್ಲಿ ಮೊನಾಲಿಸಾಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿದ ಕೇರಳದ ಜನರು, ಯಾಕೋ ಏನೋ ಸರಿ ಎನ್ನಿಸುತ್ತಿಲ್ಲ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ : http://‘ಲಾರ್ಡ್ ಗಾಗಾ’ ಚಿತ್ರದ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ನಿರ್ದೇಶಕ ಶೂನ್ಯ!

Btv Kannada
Author: Btv Kannada

Leave a Comment

Read More

Read More