Download Our App

Follow us

Home » ಮೆಟ್ರೋ » 2024-25 ಬಿಬಿಎಂಪಿ ಬಜೆಟ್ : 12,369 ಕೋಟಿ ಗಾತ್ರದ ಬೃಹತ್​ ಬಜೆಟ್​ ಮಂಡಿಸಿದ ಬಿಬಿಎಂಪಿ..!

2024-25 ಬಿಬಿಎಂಪಿ ಬಜೆಟ್ : 12,369 ಕೋಟಿ ಗಾತ್ರದ ಬೃಹತ್​ ಬಜೆಟ್​ ಮಂಡಿಸಿದ ಬಿಬಿಎಂಪಿ..!

ಬೆಂಗಳೂರು : ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೇರಿ ಅವರು 2024-25ನೇ ಸಾಲಿನ ಬಿಬಿಎಂಪಿ ಬೆಜೆಟ್ ಮಂಡನೆ ಮಾಡಿದ್ದಾರೆ. ಒಟ್ಟು 12,369 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.

ವಿಶೇಷ ಕಮಿಷನರ್​​​ 2.17 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದು, ಸ್ವಂತ ಸಂಪನ್ಮೂಲಗಳಿಂದ 8,294 ಕೋಟಿ ಕ್ರೋಢೀಕರಣವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ 4,077 ಕೋಟಿ ನಿರೀಕ್ಷೆಯಿದೆ. ಬ್ರ್ಯಾಂಡ್ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಟೆಕ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರುಗೆ ಬೃಹತ್​​ ಬಜೆಟ್​ ಆದ್ಯತೆ ನೀಡಿದೆ. ಬ್ರ್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ 1580 ಕೋಟಿ ಮೀಸಲಿಟ್ಟಿದೆ.

ಬಜೆಟ್​​ನಲ್ಲಿ ಏನಿದೆ ?

  • ಜಾಹಿರಾತು ಮೂಲಕ 500 ಕೋಟಿ ನಿರೀಕ್ಷೆ
  • ಆಸ್ತಿ ತೆರಿಗೆ ಸಂಗ್ರಹಕ್ಕೆ ನಮ್ಮ ಸ್ವತ್ತು ತಂತ್ರಾಂಶ ಜಾರಿ
  • 16 ಸಾವಿರ ಪೌರ ಕಾರ್ಮಿಕರ ನೇಮಕಕ್ಕೆ ನಿರ್ಧಾರ
  • ಟ್ರಾಫಿಕ್​​ ಸುಧಾರಣೆಗೆ 200 ಕೋಟಿ ವೆಚ್ಚದ ಸುರಂಗ ಮಾರ್ಗ.
  • ರಸ್ತೆಗಳ ಅಗಲೀಕರಣಕ್ಕೆ 130 ಕೋಟಿ.
  • ರಾಜಕಾಲುವೆ ಬಳಿ ನಡಿಗೆ ಮಾರ್ಗ, ಸೈಕಲ್ ಪಥಕ್ಕೆ 600 ಕೋಟಿ
  • ವೈಟ್ ಟಾಪಿಂಗ್​ಗೆ 800 ಕೋಟಿ.
  • ಪರಿಶುದ್ಧ ಗಾಳಿ ಯೋಜನೆಯಡಿ 135 ಕೋಟಿ ಮೊತ್ತದ ಸೈಕಲ್ ಪಥ.
  • ಸರ್ ಎಂವಿ ರೈಲ್ವೆ ಟರ್ಮಿನಲ್ ಮೇಲ್ಸೇತುವೆಗೆ 380 ಕೋಟಿ
  • 100 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್ ರಸ್ತೆ
  • ಪಾಲಿಕೆ ಆಟದ ಮೈದಾನದ ಕೆಳಗೆ ಪ್ಲೇ ಗ್ರೌಂಡ್​ಗೆ.5 ಕೋಟಿ
  • ಫ್ಲೈ ಓವರ್​​​, ಅಂಡರ್​ ಪಾಸ್​ಗೆ 25 ಕೋಟಿ
  • ರಸ್ತೆಗಳ ನಿರ್ವಹಣೆಗೆ 40 ಕೋಟಿ
  • ಪ್ರತಿ ವಾರ್ಡ್​ಗೆ 75 ಲಕ್ಷದಂತೆ 450 ಕೋಟಿ
  • ತ್ಯಾಜ್ಯ ವಿಲೇವಾರಿಗೆ 4 ಕಡೆ ಜಮೀನು, 100 ಕೋಟಿ
  • ಪೌರ ಕಾರ್ಮಿಕರ ವಿಶ್ರಾಂತಿಗೆ 50 ಕಡೆ ವಿಶ್ರಾಂತಿ ಗೃಹ
  • ಘನತ್ಯಾಜ್ಯ ನಿರ್ವಹಣಾ ಸಮಿತಿಗೆ 1000 ಕೋಟಿ
  • ತ್ಯಾಜ್ಯ ನಿರ್ವಹಣೆಗೆ 3,673 ಖಾಯಂ, 11,307 ಗುತ್ತಿಗೆ ನೌಕರರ ನೇಮಕ
  • 25 ಕಲ್ಯಾಣಿಗಳ ಪುನರುಜ್ಜೀವನಕ್ಕೆ 1 ಕೋಟಿ
  • ಆರೋಗ್ಯ ಸೇವೆಗಳ ಉ‌ನ್ನತೀಕರಣಕ್ಕೆ 100 ಕೋಟಿ.
  • ನಮ್ಮ ಕ್ಲಿನಿಕ್..ಹೆರಿಗೆ ಆಸ್ಪತ್ರೆ ಉನ್ನತೀಕರಣಕ್ಕೆ 20 ಕೋಟಿ
  • ಮನೆ ಬಾಗಿಲಿಗೆ ಲಸಿಕೆ ಹಾಕುವ ಆರೋಗ್ಯ ಸಾರಥಿ ಯೋಜನೆ
  • ಬಿಬಿಎಂಪಿ ವ್ಯಾಪ್ತಿಯಲ್ಲೂ ಮೆಡಿಕಲ್ ಕಾಲೇಜ್ ಸ್ಥಾಪನೆ.
  • 70 ಕೋಟಿ ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್
  • ಶಾಲಾ ಕಾಲೇಜು ಸ್ಥಾಪನೆ,ನಿರ್ವಹಣೆಗೆ 173 ಕೋಟಿ.
  • 250 ಮೀಟರ್ ಎತ್ತರದ ಸ್ಕೈ ಡೆಕ್ ಗೆ 350 ಕೋಟಿ.
  • ಕೆಂಪೇಗೌಡ ಪ್ರಾಧಿಕಾರದ ಕಾರ್ಯಚಟುವಟಿಕೆಗೆ 50 ಕೋಟಿ.
  • ವಿಜಯನಗರ ಕ್ಷೇತ್ರದಲ್ಲಿ ಬೃಹತ್ ಕೆಂಪೇಗೌಡ ಭವನ
  • ಪ್ರತಿ ವರ್ಷ ಬೆಂಗಳೂರು ಹಬ್ಬ ಆಚರಣೆ
  • ನಿವೃತ್ತ ಪೌರಕಾರ್ಮಿಕರ ಕಲ್ಯಾಣಕ್ಕೆ 137 ಕೋಟಿ
  • 250 ವಿದ್ಯುತ್ ಚಾಲಿತ ಆಟೋ ಖರೀದಿಗೆ ಪ್ರೋತ್ಸಾಹ.
  • ಒಂಟಿ ಮನೆ ನಿರ್ಮಾಣಕ್ಕೆ 211 ಕೋಟಿ
  • ಶ್ರವಣ ವೃದ್ದಾಶ್ರಮ‌ ಯೋಜನೆಗೆ.4 ಕೋಟಿ.
  • ತೃತೀಯ ಲಿಂಗಿಗಳಿಗೆ ಹೊಸದಾಗಿ 48 ರಾತ್ರಿ ತಂಗುದಾಣ
  • ತೃತೀಯ ಲಿಂಗಿಗಳ ಸಹಾಯಧನ 1.5 ಲಕ್ಷಕ್ಕೆ ಏರಿಕೆ

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸಲು ಅಖಾಡಕ್ಕೆ ಧುಮುಕಿದ ಎಸ್.ಆರ್ ವಿಶ್ವನಾಥ್..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here