ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್ ಪ್ರೊಡ್ಯೂಸರ್ ಭರತ್ಗೆ ಬೆದರಿಕೆ ಹಾಕಿದ್ದ ಆರೋಪ ನಟ ದರ್ಶನ್ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಇದೀಗ ದರ್ಶನ್ ವಿರುದ್ಧ NCR ದಾಖಲಾಗಿದೆ.
ಅಕ್ಟೋಬರ್ 18ರಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿದ್ದು, ‘ಭಗವಾನ್ ಶ್ರೀ ಕೃಷ್ಣ’ ಚಿತ್ರದ ನಿರ್ಮಾಪಕ ಭರತ್ ಅವರು ಈ ಹಿಂದೆಯೇ ದೂರು ದಾಖಲಿಸಿದ್ದರು. 2022ರಲ್ಲಿ ಚಿತ್ರದ ನಾಯಕ ದೃವನ್ ವಿರುದ್ಧ ದೂರು ದಾಖಲಾಗಿತ್ತು. ನಟ ದರ್ಶನ್ ಕೈಯಲ್ಲಿ ಪೋನ್ ಮೂಲಕ ಬೆದರಿಕೆ ಹಾಕಿಸಿದ ಆರೋಪ ಕೂಡ ಕೇಳಿ ಬಂದಿತ್ತು. ದೂರು ಸ್ವೀಕರಿಸಿದ ಪೊಲೀಸರು ಸುಮ್ಮನಾಗಿದ್ದರು. ಇದೀಗ ಬೆದರಿಕೆ ಆರೋಪದಲ್ಲಿ ಭರತ್ ನಿನ್ನೆ ಮತ್ತೆ ದೂರು ನೀಡಿದ್ದಾರೆ. ಈ ಸಂಬಧ ನಟ ದರ್ಶನ್ ಹಾಗೂ ಮ್ಯಾನೇಜರ್ ನಾಗರಾಜ್ ವಿರುದ್ದ ಎನ್ಸಿಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ : 2022ರಲ್ಲಿ ಭಗವಾನ್ ಶ್ರೀ ಕೃಷ್ಣ ಎಂಬ ಚಿತ್ರವನ್ನು ನಿರ್ಮಾಪಕ ಭರತ್ ಅವರು ನಿರ್ಮಿಸಿದ್ದರು. ಚಿತ್ರದ ನಾಯಕ ಧ್ರುವನ್ ಹಾಗೂ ನಿರ್ಮಾಪಕರ ನಡುವೆ ಅಸಮಾಧಾನ ಏರ್ಪಟ್ಟಿತ್ತು. ಆಗ, ಧ್ರುವನ್ ಅವರು ಆ ವಿಚಾರವನ್ನು ನಟ ದರ್ಶನ್ ಮುಂದಿಟ್ಟಿದ್ದರು. ಆಗ ಮಧ್ಯಪ್ರವೇಶಿಸಿದ ನಟ ದರ್ಶನ್, ಫೋನ್ ಮೂಲಕ ನಿರ್ಮಾಪಕ ಭರತ್ ಅವರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಭರತ್ ಅವರು ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದರು. ಆಗ, ದೂರು ಸ್ವೀಕರಿಸಿ ಸುಮ್ಮನಾಗಿದ್ದ ಪೊಲೀಸರಿಗೆ ಭರತ್ ಅವರು ಇತ್ತೀಚೆಗೆ ಅದೇ ವಿಚಾರವಾಗಿ ಮತ್ತೆ ದೂರು ಸಲ್ಲಿಸಿದ್ದಾರೆ. ಈಗ ನಟ ದರ್ಶನ್ ಅವರ ವಿಚಾರ ಈಗ ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರಿಗೆ ಪ್ರತಿಯಾಗಿ ಪೊಲೀಸರು ಎನ್ಸಿಆರ್ ವರದಿ ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ : ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್ಗೆ HDK ಟಾಂಗ್..!