ಬೆಂಗಳೂರು : ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಕೆಎಂಎಫ್ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ಅಡಿ 150ಕ್ಕೂ ಹೆಚ್ಚು ಮಾದರಿ ಹಾಲಿನ ಉತ್ಪನ್ನಗಳು ಮಾರಾಟ ಮಾಡುತ್ತಿದ್ದು, ಅದರಂತೆ ಇದೀಗ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಪರಿಚಯಿಸಲು KMF ಸಿದ್ದತೆ ಮಾಡಿಕೊಂಡಿದೆ.
ಮುಖ್ಯವಾಗಿ ಬೆಂಗಳೂರು ಮಹಾನಗರದ ಜನರನ್ನು ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆಯನ್ನು ನಡೆಸಲಾಗಿದ್ದು, ಆರಂಭದಲ್ಲಿ ಪ್ರಾಯೋಗಿಕವಾಗಿ ಒಂದು ಮತ್ತು ಎರಡು ಕೆಜಿ ಪ್ರಮಾಣದ ದೋಸೆ ಹಿಟ್ಟಿನ ಪ್ಯಾಕೆಟ್ಗಳನ್ನು ಕೆಎಂಎಫ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೆಡಿ ಟು ಕುಕ್ ಪರಿಕಲ್ಪನೆಯಡಿ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶವನ್ನು ನಂದಿನಿಯ ದೋಸೆ ಹಿಟ್ಟು ಕಲ್ಪಿಸಲಿದ್ದು, ಈ ಮೂಲಕ ಕಡಿಮೆ ಅವಧಿಯಲ್ಲಿ ಸುಲಭವಾಗಿ ದೋಸೆ ಮಾಡಲು ಪೂರಕವಾಗಿ ಕೆಎಂಎಫ್ ದೋಸೆ ಹಿಟ್ಟು ಸಹಕಾರಿಯಾಗಲಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟು ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಶೀಘ್ರದಲ್ಲೇ ನಂದಿನಿ ದೋಸೆ ಹಿಟ್ಟು ಮಾರುಕಟ್ಟೆಗೆ ಬರಲಿದೆ.
ನಂದಿನಿ ದೋಸೆ ಹಿಟ್ಟಿನಲ್ಲಿ ಹಾಲಿನ ಉಪ ಉತ್ಪನ್ನವೇ ಪೌಡರ್ ಮತ್ತಿತ್ತರ ಪದಾರ್ಥ ಬಳಕೆ ಮಾಡಲಾಗಿದ್ದು, ಸದ್ಯ ದೋಸೆ ಹಿಟ್ಟು ತಯಾರಿಕೆಯಲ್ಲಿ ಅಕ್ಕಿ ಉದ್ದಿನ ಬೆಳೆ ಹಾಕಿ ಸಿದ್ದಪಡಿಸಲಾಗ್ತಿದೆ. ಸದ್ಯ ದೋಸೆ ಹಿಟ್ಟಿನಲ್ಲಿ ಎಂಟಿಆರ್ ಮತ್ತು ಅಸಲ್ ಕಂಪನಿಗಳು ಪ್ರಾಬಲ್ಯ ಮೆರೆದಿದ್ದು, ಇದೀಗ ದೊಡ್ಡ ದೊಡ್ಡ ಕಂಪನಿಗಳಿಗೆ ಪೈಪೋಟಿ ನೀಡಲು ಕೆಎಂಎಫ್ ಮುಂದಾಗಿದೆ.
ಇದನ್ನೂ ಓದಿ : ‘ರಾಜ್ಯ ಸರ್ಕಾರ ಕೆಡವಲು 1000 ಕೋಟಿ ರೆಡಿ’ ಹೇಳಿಕೆ – ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ FIR ದಾಖಲು..!