Download Our App

Follow us

Home » ಜಿಲ್ಲೆ » 2005ರ ಪಾವಗಡ ಬಾಂಬ್​ ಬ್ಲಾಸ್ಟ್​ ಪ್ರಕರಣ – ನಾಲ್ವರು ಮಾಜಿ ನಕ್ಸಲೈಟ್​​ಗಳು ಪೊಲೀಸರ ವಶಕ್ಕೆ..!

2005ರ ಪಾವಗಡ ಬಾಂಬ್​ ಬ್ಲಾಸ್ಟ್​ ಪ್ರಕರಣ – ನಾಲ್ವರು ಮಾಜಿ ನಕ್ಸಲೈಟ್​​ಗಳು ಪೊಲೀಸರ ವಶಕ್ಕೆ..!

ತುಮಕೂರು : 2005ರಲ್ಲಿ ನಡೆದಿದ್ದ ಪಾವಗಡ ವೆಂಕಟಮ್ಮನಹಳ್ಳಿ ಬ್ಲಾಸ್ಟ್ ಕೇಸ್​ಗೆ ಸಂಬಂಧ ನಾಲ್ವರು ಮಾಜಿ ನಕ್ಸಲೈಟ್​​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊರ್ಟ್ ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ಹಿನ್ನಲೆ ವಶಕ್ಕೆ ಪಡೆದಿದ್ದು, ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಪಾವಗಢ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಪಾವಗಡ ವೆಂಕಟಮನಹಳ್ಳಿಯಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್​​ನಲ್ಲಿ 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.‌ ಈ ಘಟನೆಯಲ್ಲಿ ಐವರು ಪೊಲೀಸರು ಸಾವನ್ನಪ್ಪಿದ್ದರು.

ಏನಿದು ಬಾಂಬ್​ ಬ್ಲಾಸ್ಟ್​ ಪ್ರಕರಣ ? 2005ರಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಾದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಮತ್ತು ತಿರುಮಣಿಯಲ್ಲಿ ನಕ್ಸಲ್​ರ ಹಾವಳಿ ಹೆಚ್ಚಾದ ಹಿನ್ನೆಲ್ಲೆಯಲ್ಲಿ ವೆಂಕಟಮ್ಮನಹಳ್ಳಿಯಲ್ಲಿ 30 ಜನರ ಕೆಎಸ್​ಆರ್​ಪಿ ತುಕುಡಿಯನ್ನು ನಿಯೋಜಿಸಲಾಗಿತ್ತು.

2005ರ ಸೆಪ್ಟೆಂಬರ್​ 10ರ ರಾತ್ರಿ 10:30ರ ಸುಮಾರಿಗೆ 300 ಜನ ನಕ್ಸಲ್​​ರು ಕೆಎಸ್​ಆರ್ಪಿ ತುಕುಡಿ ಮೇಲೆ ದಾಳಿ ಮಾಡಿದ್ದರು.ಕಪ್ಪು ಮತ್ತು ಪಾಚಿ ಹಸಿರು ಸಮವಸ್ತ್ರದಲ್ಲಿ ಮೂರು ಟ್ರಕ್‌ಗಳಲ್ಲಿ ಮಹಿಳೆಯರೂ ಸೇರಿದಂತೆ 300 ಜನ ನಕ್ಸಲ್​ರು ಆಂದ್ರ ಪ್ರದೇಶದಿಂದ ಬಂದಿದ್ದರು.

ಇವರಲ್ಲಿ 200 ಜನ ನಕ್ಸಲ್​ರು ಕೆಎಸ್​ಆರ್​ಪಿ ತುಕುಡಿ ತಂಗಿದ್ದ ಶಾಲೆಯೊಳೆಗೆ ನುಗ್ಗಿದರು. ಶರಣಾಗುವಂತೆ ಒತ್ತಾಯಿಸಿದರು. ಇನ್ನೂ 100 ಜನ ನಕ್ಸಲ್​ರು ಕಟ್ಟಡವನ್ನು ಸುತ್ತುವರೆದರು.

ಬಳಿಕ ಪೊಲೀಸರು ಶರಣಾಗಿ ಹೊರ ಬರುತ್ತಿದ್ದಂತೆ ರಾಜೀವ್ ಎಂಬ ಪೊಲೀಸ್​ ಅಧಿಕಾರಿಯ ಎದೆಗೆ ನಕ್ಸಲ್​ರು ಗುಂಡು ಹಾರಿಸಿದರು. ಬಳಿಕ ಸ್ವಾಮಿ ಎಂಬ ಅಧಿಕಾರಿ ಮೇಲೆ ಗುಂಡು ಹಾರಿಸಿದರು.

ಬಳಿಕ ಪೊಲೀಸರು ತಂಗಿದ್ದ ಶಾಲೆಯ ಮೇಲೆ ಗ್ರೆನೆಡ್​ ಬಾಂಬ್​ ದಾಳಿ ಮಾಡಿದರು. ಈ ವೇಳೆ ಕೂಡ ಹಲವು ಅಧಿಕಾರಿಗಳು ಪ್ರಾಣ ಬಿಟ್ಟರು. ಆರ್‌ಎಸ್‌ಐ ಕಾಲವಾಡ, ಹೆಡ್‌ಕಾನ್ಸ್‌ಟೇಬಲ್‌ಗಳಾದ ಸಿದ್ದರಾಮಣ್ಣ, ಜಯರಾಮ್, ರಾಜೀವ್ ಮತ್ತು ಚಿಕ್ಕನರಸಯ್ಯ ಮತ್ತು ಕಾನ್‌ಸ್ಟೆಬಲ್ ವೆಂಕಟೇಶ್ ಮೃತ ಪೊಲೀಸರು.

ಈ ಘಟನೆ ನಡೆಯುವ ಮುನ್ನ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್​ ಸಹಚರು ಮೃತಪಟ್ಟಿದ್ದರು. ಇದರ ಪ್ರತೀಕಾರ ತೀರಿಸಿಕೊಳ್ಳಲು ಈ ಹತ್ಯೆಗಳನ್ನು ಮಾಡಿದರು ಎನ್ನಲಾಗಿತ್ತು. ಘಟನೆ ಸಂಬಂಧ 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಜೆಟ್​ ಲ್ಯಾಗ್​ ಪಬ್​ ಕೇಸ್​ ; ನಟ ದರ್ಶನ್​​ ಸೇರಿ ಸೆಲೆಬ್ರಿಟಿಗಳಿಗೆ ನೋಟಿಸ್​..  

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here