ಬೆಂಗಳೂರು : ಜೆಟ್ ಲ್ಯಾಗ್ ಪಬ್ನಲ್ಲಿ ಸೆಲೆಬ್ರಿಟಿ ಪಾರ್ಟಿ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ 10ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಯಾರಿಗೆ ನೊಟೀಸ್ ..? ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನಟ ಚಿಕ್ಕಣ್ಣ, ಡಾಲಿ ಧನಂಜಯ್ ಮತ್ತು ತರುಣ್ ಸುಧೀರ್, ಹರಿಕೃಷ್ಣ, ನೀನಾಸಂ ಸತೀಶ್ ಹಾಗೂ ಜೆಟ್ ಲ್ಯಾಗ್ ಪಬ್ ಒಡತಿ ಶಶಿರೇಖಾ ಜಗದೀಶ್ಗೂ ನೋಟಿಸ್ ನೀಡಿದ್ದಾರೆ.
ಜೆಟ್ ಲ್ಯಾಗ್ ಪಬ್ನಲ್ಲಿ ರೂಲ್ಸ್ ಬ್ರೇಕ್ ಮಾಡಿ ಬೆಳಗಿನ ಜಾವದವರೆಗೂ ಪಾರ್ಟಿ ನಡೆದಿತ್ತು. ದರ್ಶನ್ ಸೇರಿ 30ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪೊಲೀಸರು ಪಬ್ ಒಳಗಿನ CCTV ದೃಶ್ಯ ಪರಿಶೀಲಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇನ್ನೆರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್ ಸೇರಿ 10ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಬಿಟಿವಿಗೆ ಉತ್ತರ ವಿಭಾಗ DCP ಸೈದುಲು ಅಡಾವತ್ ಮಾಹಿತಿ ತಿಳಿಸಿದ್ದಾರೆ.
ನಟ ದರ್ಶನ್ ಸದ್ಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಯಾಕೆಂದರೆ ಸಿನಿಮಾ ಪ್ರಮೋಷನ್ಗಾಗಿ ದರ್ಶನ್ ದುಬೈಗೆ ತೆರಳಿದ್ದಾರೆ. ದುಬೈನಿಂದ ಬಂದ ನಂತರ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ. ದರ್ಶನ್ ಸೆಲೆಬ್ರಿಟಿ ಪಾರ್ಟಿ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೆಲೆಬ್ರಿಟಿಗಳ ಪಾರ್ಟಿಗಾಗಿ ಜೆಟ್ಲ್ಯಾಗ್ ಪಬ್ ಇಡೀ ರಾತ್ರಿ ಓಪನ್ ಆಗಿತ್ತು.
ಇದನ್ನೂ ಓದಿ : ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾ*ವು..