ಬೆಂಗಳೂರು :ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಿದ್ದಾರೆ. ನಟ ದರ್ಶನ್ಗೆ ಜೈಲು ವಾಸ, ಪೊಲೀಸ್ ದೂರುಗಳು ಇದು ಮೊದಲಲ್ಲ. ಈ ಹಿಂದೆಯೂ ನಟ ದರ್ಶನ್ ಹಲವಾರು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು.
ಇವತ್ತಿಗೆ 12 ವರ್ಷದ ಹಿಂದೆ ನಟ ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಮೊದಲ ಬಾರಿ ಜೈಲು ಸೇರಿದ್ದರು. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಅವರ ಮೇಲೆ ತೀವ್ರ ಹಲ್ಲೆಯನ್ನು ದರ್ಶನ್ ಮಾಡಿದ್ದರು. ವಿಜಯಲಕ್ಷ್ಮಿ ಅವರ ಮುಖಕ್ಕೆ, ಕೈಗೆ ಗಾಯ ಮಾಡಿದ್ದರು. ವಿಜಯಲಕ್ಷ್ಮಿ ಅವರೇ ದರ್ಶನ್ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ದರ್ಶನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
12 ವರ್ಷದಿಂದ ನಟ ದರ್ಶನ್ ಮೂರ್ನಾಲ್ಕು ವಿವಾದದಲ್ಲಿ ಸಿಲುಕಿಕೊಂಡಿದ್ದರು. 12 ವರ್ಷದ ಹಿಂದೆ ಸೇಮ್ ಸಬ್ ಡಿವಿಷನ್ನಲ್ಲಿ ಕೇಸ್ ಅರೆಸ್ಟ್ ಆಗಿದ್ದ ನಟ ದರ್ಶನ್ ಮೇಲೆ ಇದೀಗ ಮತ್ತೆ ಕೊಲೆ ಕೇಸ್ ಹೆಗಲೇರಿದೆ. ಝೀರೋದಿಂದ ಹೀರೋ ಆಗಿ ಬೆಳೆದಿದ್ರೂ ಬುದ್ದಿ ಕಲಿಯದ ದರ್ಶನ್ ಇದೀಗ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಭಾಗಿಯಾಗಿದ್ದಾರೆ. ದರ್ಶನ್ ಕೊಲೆ ಪ್ರಕರಣದಿಂದ ಸ್ಯಾಂಡಲ್ವುಡ್ ತಲೆ ತಗ್ಗಿಸುವಂತಾಗಿದೆ.
ನಟಿ ಪವಿತ್ರಾಗೆ ರೇಣುಕಾಸ್ವಾಮಿ ಅಶ್ಲೀಲ ಕಮೆಂಟ್ ಮಾಡಿದ್ದ, ಹೀಗಾಗಿ ರೇಣುಕಾಸ್ವಾಮಿಯನ್ನು ದರ್ಶನ್ ಬೆಂಗಳೂರಿಗೆ ಕರೆಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾಗೌಡ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಆರೋಪದಲ್ಲಿ ಪವಿತ್ರಾಗೌಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಮತ್ತು ಪವಿತ್ರಾಗೌಡ ಸೂಚನೆ ಮೇರೆಗೆ ಹಲ್ಲೆ ಮಾಡಿದ್ದೇವೆ ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ.
ಈ ವೇಳೆ ದರ್ಶನ್ ಕೂಡಾ ರೇಣುಕಾಸ್ವಾಮಿಗೆ ಮನಸೋ ಇಚ್ಛೆ ಹೊಡೆದಿದ್ರು, ಬಳಿಕ ಹಲ್ಲೆಯ ಏಟಿಗೆ ಗಂಭೀರ ಗಾಯಗೊಂಡಿದ್ದ ಯುವಕ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ.ಆನಂತರ ಶವವನ್ನು ಕಾಮಾಕ್ಷಿ ಪಾಳ್ಯದ ಸುಮನಹಳ್ಳಿಗೆ ತಂದಿದ್ರು, ಸುಮನಹಳ್ಳಿಯ ರಾಜಕಾಲುವೆ ಬಿಸಾಕಿ ಹುಡುಗರು ಅಲ್ಲಿಂದ ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ : ನಟ ದರ್ಶನ್ ಆಪ್ತೆ ಪವಿತ್ರಾಗೌಡ ಪೊಲೀಸರ ವಶಕ್ಕೆ..!