ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಬೆಳಿಗ್ಗೆ ಅರೆಸ್ಟ್ ಮಾಡಿದ್ದಾರೆ. ಇದೀಗ ಈ ಪ್ರಕರಣ ಸಂಬಂಧ ದರ್ಶನ್ ಗೆಳತಿ ಪವಿತ್ರಾ ಗೌಡನನ್ನು ಕೂಡ ಅರೆಸ್ಟ್ ಮಾಡಲಾಗಿದೆ.
ಪವಿತ್ರಾ ಗೌಡನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಪವಿತ್ರಾಗೆ ರೇಣುಕಾಸ್ವಾಮಿ ಅಶ್ಲೀಲ ಕಮೆಂಟ್ ಮಾಡಿದ್ದ, ಹೀಗಾಗಿ ರೇಣುಕಾಸ್ವಾಮಿಯನ್ನು ದರ್ಶನ್ ಬೆಂಗಳೂರಿಗೆ ಕರೆಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾಗೌಡ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಆರೋಪದಲ್ಲಿ ಪವಿತ್ರಾಗೌಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಮತ್ತು ಪವಿತ್ರಾಗೌಡ ಸೂಚನೆ ಮೇರೆಗೆ ಹಲ್ಲೆ ಮಾಡಿದ್ದೇವೆ ಎಂದು ಹುಡುಗರು ಹೇಳಿದ್ದಾರೆ.
ಈ ವೇಳೆ ದರ್ಶನ್ ಕೂಡಾ ರೇಣುಕಾಸ್ವಾಮಿಗೆ ಮನಸೋ ಇಚ್ಛೆ ಹೊಡೆದಿದ್ರು, ಈ ಥಳಿತದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದ. ಆನಂತರ ಶವವನ್ನು ಕಾಮಾಕ್ಷಿ ಪಾಳ್ಯದ ಸುಮನಹಳ್ಳಿಗೆ ತಂದಿದ್ರು, ಸುಮನಹಳ್ಳಿಯ ರಾಜಕಾಲುವೆ ಬಿಸಾಕಿ ಹುಡುಗರು ಅಲ್ಲಿಂದ ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ : ಪವಿತ್ರಗೌಡಗಾಗಿ ಕೊಲೆಗಡುಕ ಆದ್ರಾ ನಟ ದರ್ಶನ್..!?