ವಿಜಯಪುರ : ಯುವಕನೋರ್ವ ಯುವತಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ವಿಜಯಪುರ ತಾಲೂಕಿನ ನಾಗಠಾಣಾ ಗ್ರಾಮದಲ್ಲಿ ನಡೆದಿದೆ. ಶ್ರೀಶೈಲ ಮಸಳಿ ಎಂಬಾತ ಈ ಕೃತ್ಯವೆಸಗಿದ ಯುವಕನಾಗಿದ್ದಾನೆ.
ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ಯುವತಿಗೆ ಶ್ರೀಶೈಲ ಕೆಲ ದಿನಗಳಿಂದ ಚುಡಾಯಿಸುತ್ತಾ ಬಂದಿದ್ದ. ನಿನ್ನೆ ಯುವತಿ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ತೆರಳುವಾಗ ಮತ್ತೆ ಚುಡಾಯಿಸಿದ್ದಾನೆ. ಈ ವೇಳೆ ಯುವತಿ ಚಪ್ಪಲಿ ತೋರಿಸಿದ್ದಾಳೆ. ಚಪ್ಪಲಿ ತೋರಿಸಿದ್ದಕ್ಕೆ ಕೋಪಗೊಂಡು ಯುವತಿಗೆ ಶ್ರೀಶೈಲ ಚಪ್ಪಲಿಯಿಂದ ಥಳಿಸಿದ್ದಾನೆ.
ಯುವತಿಗೆ ಥಳಿಸುವ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಶ್ರೀಶೈಲ ಮಸಳಿ ಎಸ್ಕೇಪ್ ಆಗಿದ್ದು, ನ್ಯಾಯ ಕೊಡಿಸಿ ಎಂದು ಯುವತಿ ಕಡೆಯವರು ಪ್ರೊಟೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕೊರಳು ಪಟ್ಟಿ ಹಿಡಿದು ಬಡಿದಾಡಿಕೊಂಡ ಕಾರ್ಯಕರ್ತರು..!
Post Views: 678