Download Our App

Follow us

Home » ಜಿಲ್ಲೆ » ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕೊರಳು ಪಟ್ಟಿ ಹಿಡಿದು ಬಡಿದಾಡಿಕೊಂಡ ಕಾರ್ಯಕರ್ತರು..!

ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕೊರಳು ಪಟ್ಟಿ ಹಿಡಿದು ಬಡಿದಾಡಿಕೊಂಡ ಕಾರ್ಯಕರ್ತರು..!

ಕೋಲಾರ : ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಫೈಟ್ ನಡೆದಿದೆ. ಕೊರಳು ಪಟ್ಟಿ ಹಿಡಿದು ಕಾರ್ಯಕರ್ತರು ಬಡಿದಾಡಿಕೊಂಡಿದ್ದಾರೆ. ಬ್ಯಾನರ್​​ನಲ್ಲಿ ನಾಯಕರ ಫೋಟೋ ಅಳವಡಿಕೆ ವಿಚಾರಕ್ಕೆ ಕೊತ್ತೂರು ಮಂಜುನಾಥ್​​ ಮತ್ತು ಊರುಬಾಗಿಲು ಶ್ರೀನಿವಾಸ್​ ಗುಂಪಿನ ಗಲಾಟೆ​ ನಡೆದಿದೆ.

ಕೆಪಿಸಿಸಿಯ ಕೋಲಾರ ಉಸ್ತುವಾರಿ ರಾಜ್​ಕುಮಾರ್​ ಸಭೆಯಲ್ಲೇ ಪರಸ್ಪರ ಬಡಿದಾಟ ನಡೆದಿದೆ. ಸಚಿವ ಕೆ.ಹೆಚ್​.ಮುನಿಯಪ್ಪ ಆಪ್ತ ಕೋಲಾರ ಜಿಲ್ಲಾ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಆಗಿದ್ದು, ಬೂತ್​ಗಳಿಗೆ ಏಜೆಂಟ್​ ನೇಮಕ ಮಾಡುವ ವಿಚಾರಕ್ಕೆ ಜಗಳ ಶುರುವಾಗಿದೆ.

ಇದೇ ವೇಳೆ ಸಭೆಯ ಫ್ಲೆಕ್ಸ್​ಗಳಲ್ಲಿ ಯಾವುದೇ ನಾಯಕರ ಫೋಟೋ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಕೋಲಾರ ಕಾಂಗ್ರೆಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ದು, ಶ್ರೀನಿವಾಸ್​ ಮೇಲೆ ಕೊತ್ತೂರು ಬಣ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ.

ಕಚೇರಿಯಲ್ಲಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ರಮೇಶ್ ಕುಮಾರ್ , ಕೊತ್ತೂರು ಮಂಜುನಾಥ್, ನಸೀರ್ ಅಹ್ಮದ್ ಫೋಟೋ ಇಲ್ಲದ ಹಿನ್ನೆಲೆ ಗಲಾಟೆ ನಡೆದಿದ್ದು ಕಾರ್ಯಕರ್ತರು ಮತ್ತು ಮುಖಂಡರ ಮಧ್ಯೆ ಹೊಡೆದಾಟ ನಡೆದಿದೆ.

ಇದನ್ನೂ ಓದಿ : ದೆಹಲಿ ಚಲೋಗೆ ಹೊರಟಿದ್ದ ಕರ್ನಾಟಕದ ರೈತರು ಅರೆಸ್ಟ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

Live Cricket

Add Your Heading Text Here