ಬೆಂಗಳೂರು : ಯಲಹಂಕ ಡಬಲ್ ಮರ್ಡರ್ ಪ್ರಕರಣ ಸಂಬಂಧ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಲವ್ ಕಹಾನಿಯೊಂದು ಬಯಲಾಗಿದೆ. ಇಬ್ಬರು ಆರೋಪಿಗಳನ್ನ ಯಲಹಂಕ ಪೊಲೀಸರು ಅರೆಸ್ಟ್ ಮಾಡಿದ್ದು, ಸಂಗಮ್, ಸಮೀರ್ ಬಂಧಿತ ಆರೋಪಿಗಳು.
ಒಂದೇ ಯುವತಿ ಜೊತೆ ಇಬ್ಬರು ನೇಪಾಳಿ ಹುಡುಗರ ಲವ್ವಿ-ಡವ್ವಿ ನಡೆಯುತ್ತಿದ್ದು, ಸಂಗಮ್ ಗೆಳತಿಗೆ ಮೃತ ಬಿಕ್ರಂ ಸಿಂಗ್ ಮೇಸೆಜ್, ವಿಡಿಯೋ ಕಾಲ್ ಮಾಡುತ್ತಿದ್ದ. ನೇಪಾಳ ಮೂಲದ ಆರೋಪಿ, ಮೃತ ಬಿಕ್ರಂ ಸಿಂಗ್ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ರು. ಇಬ್ಬರೂ ಯುವತಿಗೆ ಮೆಸೇಜ್ ಮಾಡೋದು, ಮಾತಾಡೋದು ಮಾಡ್ತಿದ್ರು. ಬಿಕ್ರಂ ಯುವತಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ. ಹೀಗೆ ಇಬ್ಬರ ನಡುವೆ ನನ್ನ ಹುಡುಗಿ ನನ್ನ ಹುಡುಗಿ ಅಂತ ಆಗಾಗ ಕಿತ್ತಾಡ್ತಿದ್ರು.
ಕೆಲ ದಿನಗಳ ಹಿಂದೆ ಬಿಕ್ರಂ ಸಿಂಗ್ ಸ್ನೇಹಿತರ ಜೊತೆ ಪಾರ್ಟಿಗೆ ಹೋಗ್ತಿದ್ದ. ಈ ವಿಚಾರ ತಿಳಿದು ಆರೋಪಿಗಳು ಬಿಕ್ರಂ ಸಿಂಗ್ ಬಳಿ ಬಂದಿದ್ದು, ಇದೇ ವೇಳೆ ಹಲ್ಲೆ ಮಾಡಿ, ಟೈಲ್ಸ್ ಕಲ್ಲಿನಿಂದ ಬಿಕ್ರಂಗೆ ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವವಾಗಿ ಬಿಕ್ರಂ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದೇ ವೇಳೆ ಜಗಳ ಬಿಡಿಸಲು ಮುಂದಾಗಿದ್ದ ತೂರಿಯನ್ನು ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಎರಡು ಕೊಲೆ ಮಾಡಿದ್ರೂ ಏನೂ ಆಗಲೇ ಇಲ್ಲದಂತೆ ಆರೋಪಿಗಳು ಕೆಲಸ ಮಾಡ್ತಿದ್ದರು. ಇದೀಗ ಯಲಹಂಕ ನ್ಯೂ ಟೌನ್ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕೀರ್ತಿ ಸುರೇಶ್ – ಇಲ್ಲಿದೆ ವೆಡ್ಡಿಂಗ್ ಫೋಟೋಸ್..!