ಬೆಳಗಾವಿ : ಒಡಹುಟ್ಟಿದ ತಮ್ಮನ ಮೇಲೆ ಪಾಪಿ ಅಣ್ಣ ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆಸ್ತಿವಿವಾದ, ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಅಣ್ಣ ಈ ಕೃತ್ಯವೆಸಗಿದ್ದಾನೆ. 27 ವರ್ಷದ ಗೋಪಾಲ ಬಾವಿಹಾಳ ಹತ್ಯೆಯಾದ ದುರ್ದೈವಿ.
30 ವರ್ಷದ ಅಣ್ಣ ಮಾರುತಿ ತಮ್ಮನನ್ನು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ಯರಗಟ್ಟಿ ಪಟ್ಟಣ ಹೊರವಲಯದ ಜಮೀನಿನಲ್ಲಿ ನಡೆದಿದೆ. ನಿತ್ಯ ಕುಡಿದು ಬಂದು ಪಿತ್ರಾರ್ಜಿತ ಆಸ್ತಿಗಾಗಿ ಮೃತ ಗೋಪಾಲ ಕಿರಿಕಿರಿ ಮಾಡ್ತಿದ್ದ. ಗೋಪಾಲ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ನ್ನು ಪತ್ನಿ ಮನೆಯಲ್ಲಿ ಬಿಟ್ಟದ್ದ. ಕಿರಿಕಿರಿಗೆ ಬೇಸತ್ತು ಮಾರುತಿ, ಬೈಕ್ನಲ್ಲಿ ಹೊರಟಿದ್ದ ಗೋಪಾಲನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದಾನೆ.
ಅಣ್ಣ-ತಮ್ಮ ಇಬ್ಬರು 15 ದಿನಗಳ ಹಿಂದಷ್ಟೇ ತಮ್ಮ ಪಾಲಿನ ಆಸ್ತಿ ಪಡೆದುಕೊಂಡಿದ್ದರು. ಜಮೀನು, ಹಣ ಪಡೆದ ಬಳಿಕ ಗೋಪಾಲ & ಮಾರುತಿ ಬಾವಿಹಾಳ ಬೇರೆಯಾಗಿದ್ದರು. ನಂತರ ಗೋಪಾಲನಿಗೆ ಬಂದಿದ್ದ ಟ್ರ್ಯಾಕ್ಟರ್ ಹೆಂಡತಿ ಮನೆಯಲ್ಲಿ ಇಟ್ಟಿದ್ದಕ್ಕೆ ಅಣ್ಣ ಗಲಾಟೆ ಮಾಡಿದ್ದ. ಮಾರುತಿ ಬಾವಿಹಾಳ ತಮ್ಮನನ್ನು ಕೊಲೆ ಮಾಡಲು ಹೊಂಚು ಹಾಕಿ ಕುಳಿತಿದ್ದ. ಬೂದಿಕೊಪ್ಪ ರಸ್ತೆಯಲ್ಲಿ ಗೋಪಾಲನ ಬೈಕ್ ಬರುವಾಗ ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆದಿದ್ದಾನೆ. ಕೆಳಗೆ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದಾನೆ. ಟ್ರಾಕ್ಟರ್ ನಡಿ ಸಿಲುಕಿದ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಿಗ್ಬಾಸ್ಗೆ ಮತ್ತೆ ಸಂಕಷ್ಟ – ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಗ್ರಾಮ ಪಂಚಾಯಿತಿ ಸ್ಪಷ್ಟನೆ..!