ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇದೀಗ ಸಿ.ಟಿ ರವಿ ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಸಿ.ಟಿ ರವಿ ಪ್ರಕರಣ ಕ್ರಿಮಿನಲ್ ಅಪರಾಧ ಪ್ರಕರಣ. ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದು ಸತ್ಯ, ಆ ಪದ ಬಳಸಿದ್ದು ಖಂಡನೀಯ ಎಂದಿದ್ದಾರೆ.
ಸಿ.ಟಿ ರವಿ ಪ್ರಕರಣವನ್ನು ಬಿಜೆಪಿ ನ್ಯಾಯಾಂಗ ತನಿಖೆ ನೀಡಲು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿ.ಟಿ ರವಿ ಪ್ರಕರಣವನ್ನು ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಿಜೆಪಿಯವರು ನ್ಯಾಯಾಂಗ ತನಿಖೆಗೆ ಯಾಕೆ ಕೇಳುತ್ತಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಳುತ್ತಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದವರಿಂದ ಈ ಪದ ಬಳಕೆ ಖಂಡನೀಯ. ಸದನದಲ್ಲಿ ವಿಡಿಯೋ, ಆಡಿಯೋ ಕ್ಲಿಪಿಂಗ್ ಇದೆ, ಶಾಸಕರು ಸಾಕ್ಷಿ ಇದ್ದಾರೆ ಎಂದು ಕಲಬುರಗಿ ಏರ್ಪೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ MLC ಸಿ.ಟಿ. ರವಿ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಬಂಧಿಸಿ ಫೇಕ್ ಎನ್ಕೌಂಟರ್ ಮಾಡೋ ಉದ್ದೇಶವಿತ್ತು ಅನ್ನಿಸುತ್ತೆ – ಪ್ರಹ್ಲಾದ್ ಜೋಶಿ ಸ್ಪೋಟಕ ಹೇಳಿಕೆ..!