ನವದೆಹಲಿ : ಕೇಂದ್ರ-ರಾಜ್ಯದ ನಾಯಕರು ನನಗೆ ಅವಕಾಶ ಕೊಟ್ಟಿದ್ದಾರೆ. ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ನನ್ನ ಕೆಲಸವನ್ನು ಮಾಡುತ್ತೇನೆ ಎಂದು ತುಮಕೂರು ಸಂಸದ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನ ಕನ್ಫರ್ಮ್ ಆಗ್ತಿದ್ದಂತೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ವಿ.ಸೋಮಣ್ಣ ಅವರು, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುವೆ. ದೇಶ ಮತ್ತು ಕರ್ನಾಟಕದ ಏಳಿಗೆಗಾಗಿ ನಾವೆಲ್ಲಾ ಕೆಲಸ ಮಾಡ್ತೇವೆ. ರಾಜ್ಯದಿಂದ ಐವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗ್ತಿದೆ. ನನ್ನನ್ನು ಪರಿಗಣಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಮೋದಿಜಿ, ಅಮಿತ್ ಶಾ, ನಡ್ಡಾ, ರಾಜ್ನಾಥ್ ವಿಶ್ವಾಸ ಉಳಿಸಿಕೊಳ್ಳುವೆ. ಬಿಎಸ್ವೈ, ಬೊಮ್ಮಾಯಿ, ಶೆಟ್ಟರ್, ವಿಜಯೇಂದ್ರ, ಅಶೋಕ್ ಸೇರಿ ಆರಿಸಿದ್ದಾರೆ ಎಂದು ದೆಹಲಿಯಲ್ಲಿ ತುಮಕೂರು ಸಂಸದ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಮೋದಿ ಕ್ಯಾಬಿನೆಟ್ನಲ್ಲಿ ಕರ್ನಾಟಕದ ಐವರಿಗೆ ಸಚಿವ ಸ್ಥಾನ ಫಿಕ್ಸ್..!
Post Views: 70