ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಇನ್ನೇನು ಸನೀಹದಲ್ಲಿದ್ದು, ಮನೆಯಲ್ಲಿ ಟಾಸ್ಕ್ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಒಂದು ವಿಕೆಟ್ ಬೀಳೋದು ಪಕ್ಕಾ ಆಗಿದ್ದು, ಎಲಿಮಿನೇಟ್ ಮಾಡುವ ಕೊನೆಯ ಹಂತದಲ್ಲಿ ಚೈತ್ರಾ ಕುಂದಾಪುರ ಅವರೇ ಟಾರ್ಗೆಟ್ ಆಗಿದ್ದಾರೆ.
ಇದೀಗ ಬಿಗ್ ಬಾಸ್ ನಿಮ್ಮೊಳಗೆ ಚರ್ಚಿಸಿ ಟಿಕೆಟ್ ಟು ಫಿನಾಲೆಯಿಂದ ಒಬ್ಬ ಸದಸ್ಯರನ್ನು ಹೊರಗಡೆ ಇಡಬೇಕು ಎಂದು ಆದೇಶಿಸಿದರು. ಅದರಂತೆ ಎಲ್ಲ ಸದಸ್ಯರು ಚೈತ್ರಾ ಹೆಸರನ್ನು ತೆಗೆದುಕೊಂಡರು. ಚೈತ್ರಾ ಟೀಂನಿಂದ ಹೊರ ಬಿದ್ದರು. ಅದೇ ವೇಳೆ ಚೈತ್ರಾ ಕಣ್ಣೀರಿಟ್ಟಿದ್ದಾರೆ. ಮೊದಲಿಂದಲೂ ಹೀಗೆ ಟಾರ್ಗೆಟ್ ಮಾಡಿ ನನ್ನನ್ನು ಹೊರಗೆ ಇಟ್ಟಿದ್ದಾರೆ ಎಂದು ಅತ್ತಿದ್ದಾರೆ.
ಚೈತ್ರಾ ಅವರನ್ನ ಟಿಕೆಟ್ ಟು ಫಿನಾಲೆ ಓಟದಿಂದ ಔಟ್ ಮಾಡಲು ಮಂಜು, ಧನರಾಜ್, ಗೌತಮಿ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಮಂಜು ಅವರು ಚೈತ್ರಾಗೆ ವಾದ, ವಾದ, ವಾದ ಅಂದ್ರೆ ಚೈತ್ರಾ ಎಂದಿದ್ದಾರೆ. ಧನರಾಜ್ ಕೂಡ ಚೈತ್ರಾ ಅವರಲ್ಲಿ ತಪ್ಪನ್ನು ಸರಿ ಮಾಡಿಕೊಂಡು ಮುಂದೆ ಹೋಗುವ ಗುಣ ಅವರಲ್ಲಿ ಇಲ್ಲ ಅಂದ್ರೆ ಗೌತಮಿ ಅವರು ಎಲ್ಲರೂ ಒಬ್ಬರ ಹೆಸರನ್ನೇ ತೆಗೆದುಕೊಳ್ಳುತ್ತಾರೆ ಅಂದ್ರೆ ಅವರ ಕಡೆಯಿಂದ ಪದೇ, ಪದೇ ತಪ್ಪು ಆಗುತ್ತಾ ಇದೆ ಎಂದು ಅರ್ಥ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಸದಸ್ಯರ ಈ ಅಭಿಪ್ರಾಯದಿಂದ ಟಿಕೆಟ್ ಟು ಫಿನಾಲೆ ಓಟದಿಂದ ಚೈತ್ರಾ ಅವರು ಕ್ಯಾನ್ಸಲ್ ಆಗಿದ್ದಾರೆ. ಕ್ಯಾಪ್ಟನ್ ರಜತ್ ಅವರು ಫಿನಾಲೆ ಓಟದಿಂದ ಚೈತ್ರಾ ಅವರನ್ನ ಕಟ್ ಮಾಡಿ ಕ್ಯಾನ್ಸಲ್ ಅನ್ನೋ ಸೀಲ್ ಕೂಡ ಒತ್ತಿದ್ದಾರೆ.
ಇದನ್ನೂ ಓದಿ : ಜಾತ್ರೆಯಲ್ಲಿ ಮದವೇರಿದ ಆನೆಯ ಪುಂಡಾಟ.. ವ್ಯಕ್ತಿಯನ್ನು ಸೊಂಡಿಲಿನಿಂದ ಬಿಸಾಡಿ ಆಕ್ರೋಶ – 29 ಮಂದಿಗೆ ಗಾಯ..!