Download Our App

Follow us

Home » ಕ್ರೀಡೆ » ಮಹಿಳಾ ಟಿ20 ವಿಶ್ವಕಪ್ : ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ.. ಸೆಮಿಸ್‌ ಕನಸು ಜೀವಂತ..!

ಮಹಿಳಾ ಟಿ20 ವಿಶ್ವಕಪ್ : ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ.. ಸೆಮಿಸ್‌ ಕನಸು ಜೀವಂತ..!

ದುಬೈ : ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಜಿದ್ದಾಜಿದ್ದಿ ಕದನದಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ 6 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.

ಇದರೊಂದಿಗೆ ಟಿ20 ವಿಶ್ವಕಪ್‌ ಪ್ರಸಕ್ತ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದು ಸೆಮಿಸ್‌ ಕನಸು ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಮಹಿಳಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಗಳ ಕಲೆ ಹಾಕಿತು.

ಆ ಬಳಿಕ 106 ರನ್ ಗಳ ಗುರಿ ಬೆನ್ನಟ್ಟಿ ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 106 ರನ್ ಬಾರಿಸಿ ಗೆದ್ದು ಬೀಗಿದೆ. ಭಾರತ ಪರ ಬೌಲಿಂಗ್ ನಲ್ಲಿ ಅರುಂಧತಿ ರೆಡ್ಡಿ 3, ಶ್ರೇಯಾಂಕಾ ಪಟೇಲ್ 2, ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಆಶಾ ಶೋಭನ ತಲಾ 1 ವಿಕೆಟ್ ಪಡೆದಿದ್ದಾರೆ. ಭಾರತ ಪರ ಶಫಾಲಿ ವರ್ಮಾ 32, ಜೆಮಿಮಾ ರಾಡ್ರಿಗಸ್ 23 ಮತ್ತು ಹರ್ಮನ್ ಪ್ರೀತ್ ಕೌರ್ ಅಜೇಯ 21 ರನ್ ಬಾರಿಸಿದ್ದಾರೆ. ಪಾಕ್ ಪರ ಫಾತೀಮಾ ಸನಾ 2 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : ದರ್ಶನ್​​ಗೆ ಬಿಡುಗಡೆಯ ಭಾಗ್ಯದ ಬಾಗಿಲು ಓಪನ್​​ ಆಗೋದೇ ಇಲ್ವಾ? ಕಾರ್ಪೊರೇಟ್​​ ಜ್ಯೋತಿಷಿ ಹೀಗೆ ಹೇಳಿದ್ಯಾಕೆ?

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here