Download Our App

Follow us

Home » ಅಂತಾರಾಷ್ಟ್ರೀಯ » ಪುರುಷರ ‘ಬೆತ್ತಲೆ ಉತ್ಸವ’ದಲ್ಲಿ ಮಹಿಳೆಯರಿಗೂ ಭಾಗವಹಿಸಲು ಅವಕಾಶ.. ಈ ಉತ್ಸವದ ವಿಶೇಷತೆ ಏನು ಗೊತ್ತಾ?

ಪುರುಷರ ‘ಬೆತ್ತಲೆ ಉತ್ಸವ’ದಲ್ಲಿ ಮಹಿಳೆಯರಿಗೂ ಭಾಗವಹಿಸಲು ಅವಕಾಶ.. ಈ ಉತ್ಸವದ ವಿಶೇಷತೆ ಏನು ಗೊತ್ತಾ?

ಟೋಕಿಯೊ : ಜಪಾನ್‌ನಲ್ಲಿ ಶತಮಾನಗಳಿಂದ ಚಾಲ್ತಿಯಲ್ಲಿರುವ ‘ನೇಕೆಡ್ ಮ್ಯಾನ್’ ಉತ್ಸವದಲ್ಲಿ ಮಹಿಳೆಯರೂ ಪಾಲ್ಗೊಳ್ಳಲು ಕೊನೊಮಿಯಾ ಧಾರ್ಮಿಕ ಕೇಂದ್ರವು ಅನುಮತಿ ನೀಡಿದೆ. 1650 ವರ್ಷಗಳ ಇತಿಹಾಸದಲ್ಲಿ ಮಹಿಳೆಯರಿಗೆ ಈ ಅವಕಾಶ ನೀಡಿರುವುದು ಇದೇ ಮೊದಲ ಸಲವಾಗಿದೆ.

ಜಪಾನಿನ ಕೊನೊಮಿಯಾ ಎಂಬ ಧಾರ್ಮಿಕ ಕೇಂದ್ರವು ಪ್ರತಿವರ್ಷ ಬೆತ್ತಲೆ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ (ಸ್ಥಳೀಯ ಭಾಷೆಯಲ್ಲಿ ‘ಹಡಕ ಮತ್ಸುರಿ’ ಎನ್ನುತ್ತಾರೆ) ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಈ ಸಾಂಪ್ರದಾಯಿಕ ಉತ್ಸವವನ್ನು ಜಪಾನ್‌ನ ಐಚಿ ಜಿಲ್ಲೆಯ ಇನಾಜಾವಾ ಪಟ್ಟಣದಲ್ಲಿ ಆಯೋಜಿಸಲಾಗುತ್ತದೆ.

ಈ ಹಬ್ಬವನ್ನು ಫೆ. 22ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಸುಮಾರು 10 ಸಾವಿರ ಸ್ಥಳೀಯ ಪುರುಷರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ಮಹಿಳೆಯರೂ ಈ ಉತ್ಸವದಲ್ಲಿ ಭಾಗವಹಿಸಬಹುದು ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ತಿಳಿಸಿದೆ. ಆದರೆ ಅದಕ್ಕೆ ಕೆಲವು ಷರತ್ತುಗಳನ್ನು ಹಾಕಿ 40 ಮಹಿಳೆಯರಿಗೆ ಮಾತ್ರ ಈ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ.

ನೇಕೆಡ್ ಮ್ಯಾನ್ ಉತ್ಸವದ ಇತಿಹಾಸ : ಜಪಾನಿನ ಸ್ಥಳೀಯ ಭಾಷೆಯಲ್ಲಿ ‘ಹಡಕ ಮತ್ಸುರಿ’ ಎಂದು ಕರೆಯಲ್ಪಡುವ ನೇಕೆಡ್ ಮ್ಯಾನ್ ಉತ್ಸವವವು, ಜಪಾನಿನ ಸುಗ್ಗಿಯ ಹಬ್ಬವಾಗಿದೆ. ಯುವಕರಲ್ಲಿ ಕೃಷಿಯತ್ತ ಒಲವು ಮೂಡಿಸಲು ಈ ಹಬ್ಬವನ್ನು ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಸುಮಾರು 1650 ವರ್ಷಗಳ ಇತಿಹಾಸವಿರುವ ಈ ಹಬ್ಬದಲ್ಲಿ ಪುರುಷರು ಕನಿಷ್ಟ ಉಡುಗೆಯನ್ನು ತೊಟ್ಟು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬದಲ್ಲಿ ಪುರುಷರು ಫಂಡೋಶಿ ಎಂದು ಕರೆಯಲ್ಪಡುವ ಜಪಾನೀಸ್ ಲೋನ್ಕ್ಲೋತ್ ಮತ್ತು ಟ್ಯಾಬಿ ಎಂದು ಕರೆಯಲ್ಪಡುವ ಒಂದು ಜೋಡಿ ಬಿಳಿ ಸಾಕ್ಸ್ ಧರಿಸಿ ಧಾರ್ಮಿಕ ಕೇಂದ್ರದ ಸುತ್ತಲೂ ಸಂಚರಿಸಿ ನಂತರ ತಮ್ಮ ದೇಹವನ್ನು ತಣ್ಣೀರಿನಿಂದ ಶುದ್ಧೀಕರಿಸಿ ಧಾರ್ಮಿಕ ಕೇಂದ್ರದ ಒಳಗೆ ಪ್ರವೇಶಿಸುತ್ತಾರೆ. ನಂತರ ಈ ಉತ್ಸವದಲ್ಲಿ ಭಾಗವಹಿಸುವ ಪುರುಷರು ಎರಡು ಅದೃಷ್ಟದ ಕೋಲುಗಳನ್ನು ಹುಡುಕಬೇಕಾಗುತ್ತದೆ. ಈ ಅದೃಷ್ಟದ  ಕೋಲುಗಳನ್ನು ಹುಡುಕುವುದು ಅತ್ಯಂತ ಕಷ್ಟಕರ ಕೆಲಸವಾಗಿದ್ದು, ಕೊನೆಯಲ್ಲಿ ಅದೃಷ್ಟವಂತರಿಗೆ ಈ ಕೋಲು ಸಿಗುತ್ತದೆ. ಈ ಅದೃಷ್ಟದ ಕೋಲನ್ನು ಗುರುತಿಸುವ ವ್ಯಕ್ತಿಯನ್ನು ʼಶಿನ್-ಒಟೊಕೊʼ ಎಂದು ಕರೆಯಲಾಗುತ್ತದೆ. ಮತ್ತು ಅವರು ಇಡೀ ವರ್ಷ ಅದೃಷ್ಟವಂತರಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ : ಶೆಟ್ಟರ್​​ ಬೆನ್ನಲ್ಲೇ ಲಕ್ಷ್ಮಣ ಸವದಿ ಬಿಜೆಪಿ ಸೇರ್ತಾರಾ..?

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here