Download Our App

Follow us

Home » ಅಪರಾಧ » ಚಿಕ್ಕಬಳ್ಳಾಪುರ : ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಲಕ್ಷ ಮೌಲ್ಯದ ಕೈ ಗಡಿಯಾರದ ಜೊತೆ ಫಾರ್ಚುನರ್ ಕಾರ್​​ ಸೀಜ್..!

ಚಿಕ್ಕಬಳ್ಳಾಪುರ : ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಲಕ್ಷ ಮೌಲ್ಯದ ಕೈ ಗಡಿಯಾರದ ಜೊತೆ ಫಾರ್ಚುನರ್ ಕಾರ್​​ ಸೀಜ್..!

ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಟೋಲ್ ಚೆಕ್ ಪೋಸ್ಟ್ ಬಳಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಚಿತ್ರವುಳ್ಳ 96 ವಾಚ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅನಂತಪುರದಿಂದ ಬೆಂಗಳೂರಿಗೆ ಬರ್ತಿದ್ದ AP 31 HE 1111 ನಂಬರ್​​ನ ಕಾರಿನಲ್ಲಿ 1 ಲಕ್ಷ ಮೌಲ್ಯದ 96 ಕೈ ಗಡಿಯಾರಗಳು ಪತ್ತೆಯಾಗಿವೆ. ವಾಚ್​​ಗಳ ಜೊತೆ 50 ಲಕ್ಷ ಬೆಲೆಯ ಫಾರ್ಚುನರ್​​ ಕಾರ್ ಕೂಡ ಸೀಜ್ ಮಾಡಲಾಗಿದೆ. ಯಾವುದೇ ದಾಖಲೆ ಇಲ್ಲದೆ ಕೈ ಗಡಿಯಾರಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಅನಂತಪುರದ ಮೂಲದ ಶ್ರೀ ಬಂಡಿ ನಾಗೇಂದ್ರ ಮೇಲೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಓಮ್ನಿ ವಾಹನದ ನಂಬರ್ ಪ್ಲೇಟ್ ಬದಲಿಸಿ ಸಾಗಿಸಲಾಗುತ್ತಿದ್ದ 20 ಲಕ್ಷ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡೂರಿನ ಚೌಡಿಪಾಳ್ಯ ಚೆಕ್ ಪೋಸ್ಟ್​ನಲ್ಲಿ ತಪಾಸಣೆ ನಡೆದಿದ್ದು, ಈ  ವೇಳೆ ಗನ್​​ಮ್ಯಾನ್​ ಇಲ್ಲದೇ ಹಣ ಸಾಗಣೆ ಮಾಡ್ತಿರೋದಕ್ಕೆ ಮತ್ತು ನಂಬರ್​​ ಬದಲಾವಣೆ ಮಾಡಿರುವುದಕ್ಕೆ ಅನುಮಾನ ಬಂದು ಸಿಬ್ಬಂದಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಹಣವನ್ನು  ಹಿರಿಯೂರಿನ ಡಿ.ಎಂ ಕುರ್ಕೆಗೆ  ತೆಗೆದುಕೊಂಡು ಹೋಗಲಾಗತಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ಪಂಚನಹಳ್ಳಿಯ ಕೆನರಾ ಬ್ಯಾಂಕ್ ಗೆ ಸೇರಿದ ಹಣ ತಿಳಿದು ಬಂದಿದೆ.

ಇದನ್ನೂ ಓದಿ : ಟ್ರಾಫಿಕ್ ಕಾನ್ಸ್​​ಟೇಬಲ್​​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹ*ಲ್ಲೆ ನಡೆಸಿದ ಬೈಕ್ ಸವಾರ : FIR ದಾಖಲು..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here