ಮೈಸೂರು : ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ನಾಳೆ ಅಂದರೆ ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮೈಸೂರಲ್ಲಿ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.
ನಾಳೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದೆ. ಮತದಾನ ಮಾಡಿ ಬಂದರೆ ಒಂದು ಕೆಜಿ ಗೋಧಿ ಹಿಟ್ಟು ಫ್ರೀಯಾಗಿ ನೀಡೋದಾಗಿ ಬಿ ಶಿಪ್ ಹಾಗೂ ವಾಸವಿ ಯುವಜನ ಸಂಘ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಗರದ ದೇವರಾಜ ಮಾರುಕಟ್ಟೆ ಬಳಿಯ ಚಿಕ್ಕ ಗಡಿಯಾರ ವೃತ್ತದ ಬಳಿ ಮಳಿಗೆ ಆರಂಭಿಸಲಾಗಿದ್ದು, ನಾಳೆ ಮತದಾನ ಮಾಡಿ ಶಾಯಿ ಹಾಕಿಸಿಕೊಂಡಿದ್ದನ್ನು ತೋರಿಸಿದರೆ ಉಚಿತವಾಗಿ ಒಂದು ಕೆಜಿ ಗೋಧಿ ಹಿಟ್ಟು ವಿತರಣೆ ಮಾಡಲಾಗುತ್ತೆ. ಮತದಾನ ಮಾಡದೇ ಎಲ್ಲಿಯೂ ಹೋಗದಿರಿ ಎಂಬ ಸಂದೇಶದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ : ಪ್ರಧಾನಿ ಮೋದಿಗೆ ಸೋಲಿನ ಹತಾಷೆ ಕಾಡ್ತಿದೆ : ಡಿಕೆ ಶಿವಕುಮಾರ್ ಟಾಂಗ್..!
Post Views: 98