Download Our App

Follow us

Home » ರಾಜಕೀಯ » ವಿಶ್ವನಾಥ್ ಅವರು ಪಕ್ಷದ ಕಟ್ಟಾಳಾಗಿ ವರ್ತಿಸುತ್ತಾರೆ ಎಂಬ ಆಶಾ ಭಾವನೆಯಿದೆ : ಡಾ.ಕೆ.ಸುಧಾಕರ್..!

ವಿಶ್ವನಾಥ್ ಅವರು ಪಕ್ಷದ ಕಟ್ಟಾಳಾಗಿ ವರ್ತಿಸುತ್ತಾರೆ ಎಂಬ ಆಶಾ ಭಾವನೆಯಿದೆ : ಡಾ.ಕೆ.ಸುಧಾಕರ್..!

ಚಿಕ್ಕಬಳ್ಳಾಪುರ : 18ನೇ ಲೋಕಸಭಾ ಚುನಾವಣೆಯ ಕಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ವೇಳೆ ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ, ಮಾಜಿ ಸಚಿವ ಡಾ ಕೆ ಸುಧಾಕರ್‌ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸುಧಾಕರ್‌ ವಿರುದ್ಧ ತಿರುಗಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರದ ಕುರಿತು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ. “ಪಾಪ ಎಸ್ಆರ್ ವಿಶ್ವನಾಥ್ ವೈಯಕ್ತಿಕ ಅಭಿಪ್ರಾಯವಿದೆ. ಬಿಜೆಪಿ ವಿಶ್ವದಲ್ಲಿ ದೊಡ್ಡ ಕಾರ್ಯಕರ್ತರ ಹೊಂದಿರುವಂತಹ ರಾಷ್ಟ್ರೀಯ ಪಕ್ಷವಿದು. ಯೋಚಿತವಾದ ತೀರ್ಮಾನವನ್ನು ಕೈಗೊಳ್ಳುತ್ತಾರೆ. ಇದೆಲ್ಲಾ ವೈಯಕ್ತಿಕ ಆಸೆ, ದುರಾಸೆಗಳಿಂದ ನೀಡುವ ವ್ಯಾಖ್ಯಾನ” ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಎಸ್ ಆರ್ ವಿಶ್ವನಾಥ್​ಗೆ ತಮ್ಮ ಮಗನಿಗೆ ಟಿಕೇಟ್ ತಪ್ಪಿರುವುದಕ್ಕೆ ಬೇಜರು ಇರಬಹುದು. ಸಮಯ ಕೊಟ್ಟಾಗ ಎಸ್ ಆರ್ ವಿಶ್ವನಾಥ್ ಮನೆಗೆ ಭೇಟಿ ನೀಡುತ್ತೇನೆ. ಪಕ್ಷದ ಕಟ್ಟಾಳಾಗಿ ವರ್ತಿಸುತ್ತಾರೆ ಎಂಬ ಆಶಾ ಭಾವನೆ ಇದೆ. ವಿಶ್ವನಾಥ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲ್ಸ ಮಾಡ್ತೇನೆ ಎಂದು ಹೇಳಿದ್ದಾರೆ. ಸುಧಾಕರ್ ಪರ ಮತ ಕೇಳಲ್ಲ ಮತ್ತು ವೇದಿಕೆ ಹಂಚಿಕೊಳ್ಳಲ್ಲ ಎಂಬ ವಿಶ್ವನಾಥ್ ಮಾತಿಗೆ ಪ್ರತಿಕ್ರಿಯೆ ನೀಡಿ. ಇದೆಲ್ಲಾ ರಾಜಕಾರಣದಲ್ಲಿ ಮಾಮೂಲಿ ಎಂದ ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ.

 ಹಿನ್ನಲೆ : ಯಲಹಂಕ ಶಾಸಕ ಎಸ್‌ಆರ್‌ ವಿಶ್ವನಾಥ್‌ ಪುತ್ರ ಅಲೋಕ್‌ ವಿಶ್ವನಾಥ್‌ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಎಸ್‌ಆರ್‌ ವಿಶ್ವನಾಥ್‌ ಅವರೇ ನಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಮಾತ್ರ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್‌ ಈಶ್ವರ್‌ ವಿರುದ್ಧ ಸೋಲು ಕಂಡಿದ್ದ ಡಾ ಕೆ ಸುಧಾಕರ್‌ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ನೀಡಿತ್ತು. ಹೈಕಮಾಂಡ್‌ನ ಈ ನಿರ್ಧಾರದ ವಿರುದ್ಧ ಇದೀಗ ಎಸ್ಆರ್ ವಿಶ್ವನಾಥ್ ಹಾಗೂ ಬಿಜೆಪಿ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ : ಕೋಲಾರ ಕಾಂಗ್ರೆಸ್​ನಲ್ಲಿ ಮಹಾ ಸ್ಫೋಟ – ಕಾಂಗ್ರೆಸ್​ನ ಇಬ್ಬರು ಎಂಎಲ್​ಸಿಗಳ ರಾಜೀನಾಮೆ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಇಂದು, ನಾಳೆ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ : ಈ ನಿಯಮಗಳ ಪಾಲನೆ ಕಡ್ಡಾಯ..!

ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಸಿಇಟಿ ಎಕ್ಸಾಂ ಪ್ರಾರಂಭವಾಗಲಿದೆ. ಇಂದು ಮತ್ತು ನಾಳೆ 2 ದಿನ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲ. ಬೆಂಗಳೂರಿನ 167

Live Cricket

Add Your Heading Text Here