Download Our App

Follow us

Home » ಕ್ರೀಡೆ » ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ? ಮಹತ್ವದ ಅಪ್‌ಡೇಟ್‌ ಕೊಟ್ಟ ಸಿಎಎಸ್‌ – ತೀರ್ಪು ಯಾವಾಗ?

ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ? ಮಹತ್ವದ ಅಪ್‌ಡೇಟ್‌ ಕೊಟ್ಟ ಸಿಎಎಸ್‌ – ತೀರ್ಪು ಯಾವಾಗ?

ಪ್ಯಾರಿಸ್ :​ ಕೇವಲ 100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಒಲಿಂಪಿಕ್‌ನಿಂದಲೇ ಅನರ್ಹಗೊಂಡಿರುವ ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಪದಕದ ಆಸೆ ಇನ್ನೂ ಜೀವಂತವಾಗಿದೆ.

ಒಲಿಂಪಿಕ್ಸ್​ ಫೈನಲ್‌ನಿಂದ ಅನರ್ಹತೆ ನಿರ್ಣಯದ ವಿರುದ್ಧ ವಿನೇಶ್ ಫೋಗಟ್ ಅವರ ಮೇಲ್ಮನವಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಕ್ರೀಡಾ ನ್ಯಾಯಮಂಡಳಿ ಸಿಎಎಸ್ ಇಂದು (ಆಗಸ್ಟ್ 11) ಪ್ರಕಟಿಸಲಿದೆ. ಮಾಹಿತಿ ಪ್ರಕಾರ (ಭಾನುವಾರ) ರಾತ್ರಿ 9.30ಕ್ಕೆ ಕೋರ್ಟ್ ತೀರ್ಪು ಪ್ರಕಟಿಸಲಿದೆ.

ಆಗಸ್ಟ್ 6ರಂದು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದಿದ್ದ ಮಹಿಳೆಯರ 50 ಕೆಜಿ ತೂಕ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯ, ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಫೋಗಟ್ ಭರ್ಜರಿ ಜಯ ಸಾಧಿಸಿದ್ದರು. ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನ 5-0 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. ಬಳಿಕ ಫೈನಲ್​ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು. ಇದಕ್ಕೆಲ್ಲಾ ಕಾರಣ ಅವರ ತೂಕದಲ್ಲಿ 100 ಗ್ರಾಂ ಏರಿಕೆ ಆಗಿದ್ದು ಎಂದು ಹೇಳಲಾಗಿತ್ತು. ಕೇವಲ 100 ಗ್ರಾಂ ತೂಕ ಹೆಚ್ಚು ಆಗಿದೆ ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಿರುವುದು ಆಕ್ರೋಶ ಮೊಳಗುವಂತೆ ಮಾಡಿತ್ತು. ಈ ಕಾರಣಕ್ಕೆ ವಿನೇಶ್ ಫೋಗಟ್ ಅವರು ಕ್ರೀಡಾ ನ್ಯಾಯಾಲಯಕ್ಕೆ ಬೆಳ್ಳಿ ಪದಕ ನೀಡಬೇಕು ಮೇಲ್ಮನವಿ ಸಲ್ಲಿಸಿದ್ದರು. ಅದರ ತೀರ್ಪು ಇಂದು ಸಂಜೆ ಹೊರಬೀಳಲಿದ್ದು, ಹೀಗಾಗಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ವಿನೇಶ್ ಫೋಗಟ್‌ಗೆ ಭಾರಿ ಬೆಂಬಲ : ಇನ್ನು ವಿನೇಶ್ ಫೋಗಟ್ ಅವರಿಗೆ ಅನ್ಯಾಯವಾಗಿದ್ದು ಅವರಿಗೆ ಬೆಳ್ಳಿ ಪದಕ ನೀಡಲೇಬೇಕು ಎಂದು ಭಾರತೀಯ ಕ್ರೀಡಾಭಿಮಾನಿಗಳ ಒತ್ತಾಯ ಮಾಡುತ್ತಿದ್ದಾರೆ. ಲಕ್ಷಾಂತರ ಕ್ರೀಡಾಭಿಮಾನಿಗಳು ವಿನೇಶ್ ಫೋಗಟ್‌ ಅವರಿಗೆ ಬೆಂಬಲ ನೀಡಿ ಎಕ್ಸ್‌ನಲ್ಲಿ ಪೋಸ್ಟ್‌ಗಳ್ನು ಹಂಚಿಕೊಂಡಿದ್ದಾರೆ. ಜಪಾನ್​ನ 57ಕೆಜಿ ಪುರುಷ ಕುಸ್ತಿ ವಿಭಾಗದ ರಿಯ್ ಹುಗುಚಿ ವಿನೇಶ್ ಪೋಗಟ್​ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕೇವಲ ಐವತ್ತು ಗ್ರಾಮ್​ ಹೆಚ್ಚು ತೂಗಿದ್ದಕ್ಕೆ ಹುಗುಚಿ ತನ್ನದೇ ನೆಲದಲ್ಲಿ ಕುಸ್ತಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಹೀಗಾಗಿ ಅವರು ಈಗ ಪೋಗಟ್ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ : ಆ ಬಂಡೆಯನ್ನು ನಂಬಿ ನಾನು ಕೆಟ್ಟಿದ್ದೆ- ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here