ಮೈಸೂರು : ಸಿದ್ದರಾಮಯ್ಯ ಜೊತೆ ಈ ಬಂಡೆಯಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ಆ ಬಂಡೆಯನ್ನು ನಂಬಿ ನಾನು ಕೆಟ್ಟಿದ್ದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆದ ಪಾದಯಾತ್ರೆ ಸಮಾವೇಶದಲ್ಲಿ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿ, ಸಿದ್ದರಾಮಯ್ಯನವ್ರೇ ಹುಷಾರ್ ಆಗಿರಿ. ಬಂಡೆ ಬಿದ್ರೆ ನಿಮ್ಮ ಪರಿಸ್ಥಿತಿ ಏನು? ಬಂಡೆ ಜೊತೆ ಸಹವಾಸ ಮಾಡಿಯೇ ನನ್ಮೇಲೆ ದೊಡ್ಡ ಬಂಡೆ ಬಿತ್ತು. ಸಿದ್ದರಾಮಯ್ಯ ಅವ್ರೇ ಬಂಡೆ ಸಹವಾಸ ಮಾಡ್ಬೇಡಿ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಇನ್ನು 10 ವರ್ಷ ಗೂಟ ಹೊಡ್ಕೊಂಡು ಇರ್ತಿನಿ ಅಂತಿರಲ್ಲ ಶಿವಕುಮಾರ್. ನಾವು ಸರ್ಕಾರ ಬಿಳಿಸುತ್ತೇವೆ ಅಂತಾ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ನಾಯಕರೇ ಸಾಕು ನಿಮ್ಮ ಸರ್ಕಾರ ಬೀಳಿಸೋಕೆ. ನಿಮ್ಮ ಮಂತ್ರಿ ರಾಜಣ್ಣ ಹೇಳಿಕೆ ಏನು? ಸತೀಶ್ ಜಾರಕಿಹೊಳಿ ಹೇಳಿಕೆ ಏನು? ನಿಮ್ಗೆ ಗೊತ್ತಿಲ್ವಾ? ಎಂದು ಮೈಸೂರಿನಲ್ಲಿ ನಡೆದ ಪಾದಯಾತ್ರೆ ಸಮಾವೇಶದಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಇವನು ಸಿಎಂ ಆಗಿದ್ದಾಗ ನಮ್ಮ ಮೇಲೆ ಸುಳ್ಳು ಕೇಸ್ ಹಾಕ್ಸಿದ್ದ – ಹೆಚ್ಡಿಕೆಗೆ ಏಕವಚನದಲ್ಲೇ ಎದಿರೇಟು ಕೊಟ್ಟ ಡಿಕೆಶಿ..!