Download Our App

Follow us

Home » ಕ್ರೀಡೆ » ವಿನೇಶ್​ ನೀವು ಚಾಂಪಿಯನ್ನರಲ್ಲಿ ಚಾಂಪಿಯನ್ – ಒಲಿಂಪಿಕ್ಸ್​ನಿಂದ ಹೊರಬಿದ್ದ ಪೋಗಟ್​ಗೆ ಪ್ರಧಾನಿ ಸಾಂತ್ವನ..!

ವಿನೇಶ್​ ನೀವು ಚಾಂಪಿಯನ್ನರಲ್ಲಿ ಚಾಂಪಿಯನ್ – ಒಲಿಂಪಿಕ್ಸ್​ನಿಂದ ಹೊರಬಿದ್ದ ಪೋಗಟ್​ಗೆ ಪ್ರಧಾನಿ ಸಾಂತ್ವನ..!

ನವದೆಹಲಿ : ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮಹಾ ಆಘಾತವಾಗಿದೆ. ಮಹಿಳೆಯರ ಕುಸ್ತಿ ವಿಭಾಗದ 50ಕೆಜಿ ಸ್ಪರ್ಧೆಯಲ್ಲಿ ಐತಿಹಾಸಿಕವಾಗಿ ಫೈನಲ್‌ಗೇರಿದ್ದ ವಿನೇಶ್‌ ಪೋಗಟ್‌, ಹೆಚ್ಚಿನ ತೂಕದ ಕಾರಣದಿಂದಾಗಿ ಫೈನಲ್‌ ಪಂದ್ಯದಿಂದ ಅನರ್ಹರಾಗಿದ್ದಾರೆ.

ಅವರೀಗ ಈ ಇವೆಂಟ್‌ನಲ್ಲಿ ಕೊನೆಯ ಸ್ಥಾನ ಪಡೆದ ರೆಸ್ಲರ್‌ ಆಗಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ನ ಹಠಾತ್‌ ನಿರ್ಧಾರದಿಂದ ಇಡೀ ಭಾರತಕ್ಕೆ ದೊಡ್ಡ ಅಘಾತವಾಗಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿನೇಶ್‌ ಪೋಗಟ್‌ ಅವರ ಬೆಂಬಲಕ್ಕೆ ನಿಂತಿದ್ದು, ಈ ಬಗ್ಗೆ ಟ್ವೀಟ್‌ ಮಾಡಿ ಸಾಂತ್ವನ ಹೇಳಿದ್ದಾರೆ. “ವಿನೇಶ್, ನೀವು ಚಾಂಪಿಯನ್ನರಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನನಗೆ ನೋವು ತಂದಿದೆ. ಇಲ್ಲಿನ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ. ಅದೇ ಸಮಯದಲ್ಲಿ, ನೀವು ಅಚಲ ಮನೋಭಾವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಇನ್ನಷ್ಟು ಸ್ಟ್ರಾಂಗ್‌ ಆಗಿ ಮರಳಿ. ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಅಚಲವಾಗಿ ನಿಂತಿದ್ದೇವೆ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here