Download Our App

Follow us

Home » ಕ್ರೀಡೆ » ಭಾರತಕ್ಕೆ ದೊಡ್ಡ ಆಘಾತ – ಚಿನ್ನದ ನಿರೀಕ್ಷೆಯಲ್ಲಿದ್ದ ವಿನೇಶ್​ ಪೋಗಟ್ ಒಲಿಂಪಿಕ್ಸ್​ನಿಂದ ಅನರ್ಹ..!

ಭಾರತಕ್ಕೆ ದೊಡ್ಡ ಆಘಾತ – ಚಿನ್ನದ ನಿರೀಕ್ಷೆಯಲ್ಲಿದ್ದ ವಿನೇಶ್​ ಪೋಗಟ್ ಒಲಿಂಪಿಕ್ಸ್​ನಿಂದ ಅನರ್ಹ..!

ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ. ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ ವಿನೇಶ್​ ಫೋಗಾಟ್​ರನ್ನು ಪ್ಯಾರಿಸ್​ ಒಲಿಂಪಿಕ್ಸ್​ ಅನರ್ಹಗೊಳಿಸಿದೆ. ಇಂದು ಫೈನಲ್​ ಪಂದ್ಯ ನಡೆಯೂವುದಕ್ಕೂ ಮುನ್ನವೇ ಭಾರತೀಯರಿಗೆ ಈ ವಿಚಾರ ಶಾಕ್ ಆಗಿದೆ. ಪ್ರೀಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಯೂಯ್‌ ಸುಸಾಕಿಗೆ ನಿನ್ನೆ ವಿನೇಶ್‌ ಫೋಗಾಟ್‌ ಮಣ್ಣು ಮುಕ್ಕಿಸಿದ್ದರು. ನಾಲ್ಕು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಯೂಯ್‌ ಸುಸಾಕಿಯನ್ನು ಸೋಲಿಸಿದ್ದರು.

ಕ್ವಾರ್ಟರ್​ ಫೈನಲ್​ನಲ್ಲಿ ಉಕ್ರೇನ್​ ಒಕ್ಸಾನಾ ಲಿವಾಚ್​ ಎದುರಿಸಿದ ವಿನೇಶ್​ ಫೋಗಾಟ್​ ಪರಾಕ್ರಮ ಮೆರೆದಿದ್ದರು. ಬಳಿಕ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್‌ ವಿರುದ್ಧ ಪ್ರದರ್ಶನ ತೋರಿ 5-0 ಅಂತರದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದರು.

ಆದರಿಂದು ಪ್ರೀಸ್ಟೈಲ್ ಫೈನಲ್‌ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್​ರನ್ನ ಎದುರಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಿನೇಶ್​ ಪೋಗಾಟ್​ರನ್ನು ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಅನರ್ಹಗೊಳಿಸಲಾಗಿದೆ. ನಿನ್ನೆಗಿಂತಾ ಇಂದು 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ನೀಡಿ ಇಂದು ಸಂಜೆ ನಡೆಯಬೇಕಾಗಿದ್ದ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಸದ್ಯ ಈ ವಿಚಾರದಿಂದ ಭಾರತೀಯರಿಗೆ ಭಾರೀ ಬೇಸರ ತಂದಿದೆ.

ಇದನ್ನೂ ಓದಿ : ಬೆಳಗಾವಿಯ ಇನ್ಸುಲೆನ್ ಟೇಪ್ ಕಾರ್ಖಾನೆಯ ಅಗ್ನಿ ದುರಂತಕ್ಕೆ ಒಂದು ಬಲಿ..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here